ಬಸ್‌ಗಳಲ್ಲಿ ಮೊಬೈಲ್‌ಗಳನ್ನು ದೋಚುತ್ತಿದ್ದ ಖದೀಮನ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

kallara-bandhana
ಬೆಂಗಳೂರು, ಆ.30- ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಿರುವ ಬಸ್‌ಗಳನ್ನು ಹತ್ತಿ ಅವರ ಮೊಬೈಲ್‌ಗಳನ್ನು ದೋಚುತ್ತಿದ್ದ ಆರೋಪಿಯನ್ನು ಜಾಲಹಳ್ಳಿ ಪೊಲೀಸರು ಬಂಸಿ 2.35 ಲಕ್ಷ ರೂ. ಬೆಲೆಯ 28 ಮೊಬೈಲ್ ಹಾಗೂ 150 ಸಿಮ್‌ಗಳನ್ನು ವಶಪಡಿಸಿಕೊಂಡಿದ್ದಾರೆ.  ಮೂಲತಃ ಶಿವಮೊಗ್ಗದ ಗೋಪಿ (20) ಬಂತ ಆರೋಪಿಯಾಗಿದ್ದು, ಈತ ಕೆಆರ್ ಪುರಂನಲ್ಲಿ ವಾಸವಾಗಿದ್ದನು. ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಿರುವ ಬಸ್‌ಗಳನ್ನೇ ಟಾರ್ಗೆಟ್ ಮಾಡಿ ಮಹಿಳೆಯರ ಬ್ಯಾಗ್‌ಗಳಿಂದ, ಯುವಕರ ಜೇಬುಗಳಿಂದ ಮೊಬೈಲ್‌ಗಳನ್ನು ದೋಚುತ್ತಿದ್ದನು.  ಆ.26ರಂದು ಜಾಲಹಳ್ಳಿ ವ್ಯಾಪ್ತಿಯಲ್ಲಿ ಪೊಲೀಸರು ಹಳೆ ಆರೋಪಿಗಳನ್ನು ಪತ್ತೆ ಮಾಡುತ್ತಿದ್ದಾಗ ಬಿಇಎಲ್ ಅಂಡರ್‌ಪಾಸ್ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ಹೋಗುತ್ತಿದ್ದ ಈತನನ್ನು ತಡೆದು ಬ್ಯಾಗನ್ನು ಪರಿಶೀಲಿಸಿದಾಗ ವಿವಿಧ ಕಂಪೆನಿಯ ಮೊಬೈಲ್‌ಗಳು ಇದ್ದುದು ಬೆಳಕಿಗೆ ಬಂದಿದೆ.  ಆರೋಪಿಯನ್ನು ಠಾಣೆಗೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದಾಗ, ಬಸ್‌ಗಳಲ್ಲಿ ಮೊಬೈಲ್‌ಗಳನ್ನು ಎಗರಿಸು ತ್ತಿದ್ದುದಾಗಿ ಒಪ್ಪಿಕೊಂಡಿದ್ದಾರೆ.  ಜಾಲಹಳ್ಳಿ ಠಾಣೆ ಇನ್ಸ್‌ಪೆಕ್ಟರ್ ಮುರುಗೇಂದ್ರಯ್ಯ ಮತ್ತು ಸಿಬ್ಬಂದಿಗಳು ಆರೋಪಿಯನ್ನು ಸೆರೆಹಿಡಿಯುವಲ್ಲಿ ಯಶಸ್ವಿ ಯಾಗಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin