ಬಸ್‍ನಲ್ಲಿ ಬಾಲಕಿ ಮೇಲೆ ಗ್ಯಾಂಗ್‍ರೇಪ್, ಮೂವರು ಕೆಎಸ್‍ಆರ್‍ಟಿಸಿ ಸಿಬ್ಬಂದಿ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

KSRTC

ಉಡುಪಿ, ಜು.11-ಹಾವೇರಿ ಜಿಲ್ಲೆಯ ರಾಣಿಬೆನ್ನೂರಿನಲ್ಲಿ ಸರ್ಕಾರಿ ಬಸ್ಸಿನಲ್ಲಿ ಬಾಲಕಿಯೊಬ್ಬಳ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದ ಕರ್ನಾಟ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ(ಕೆಎಸ್‍ಆರ್‍ಟಿಸಿ) ಮೂವರು ಸಿಬ್ಬಂದಿಯನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ.  ಬಂಧಿತರನ್ನು ರಾಣೆಬೆನ್ನೂರಿನ ಕೆಎಸ್‍ಆರ್‍ಟಿಸಿ ಬಸ್ ಕಂಡಕ್ಟರ್ ಯುವರಾಜ್ ಕಟ್ಟೆಕಾರ್(45), ಚಾಲಕ ವೀರಯ್ಯ ಹಿರೇಮಠ(40), ಹಾಗೂ ಪರ್ಯಾಯ ಚಾಲಕ ರಾಘವೇಂದ್ರ ಬಡಿಗೇರ(43) ಎಂದು ಗುರುತಿಸಲಾಗಿದೆ. ಗ್ಯಾಂಗ್‍ರೇಪ್ ನಡೆದಿದ್ದ ಬಸ್ಸನ್ನೂ ಕೂಡ ಪೊಲೀಸರು ವಶಪಡಿಸಿಕೊಂಡಿದ್ಧಾರೆ.

ಘಟನೆ ಹಿನ್ನೆಲೆ : ಮಣಿಪಾಲದಲ್ಲಿ ವಾಸವಾಗಿರುವ ಮೂಲತ: ಬೆಳಗಾವಿಯ 15 ವರ್ಷದ ಬಾಲಕಿ ಜು.5ರಂದು ರಾಣಿಬೆನ್ನೂರಿಗೆ ಏಕಾಂಗಿಯಾಗಿ ಹೊರಟಿದ್ದಳು. ಅದೇ ದಿನ ಈ ಮೂವರು ರಾಣಿಬೆನ್ನೂರಿನಲ್ಲಿ ಬಸ್ಸಿನೊಳಗೆ ಈಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದರು.   ಜು.8ರಂದು ಉಡುಪಿಗೆ ಹಿಂದಿರುಗಿದ ಬಾಲಕಿ ತನ್ನ ಪೋಷಕರಿಗೆ ನಡೆದ ದುಷ್ಕøತ್ಯದ ಬಗ್ಗೆ ತಿಳಿಸಿದ್ದಳು. ನಂತರ ಆಕೆಯ ಮನೆಯವರು ಉಡುಪಿ ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ತನಿಖೆ ನಡೆಸಿದ ಪೊಲೀಸರು ನಿನ್ನೆ ರಾತ್ರಿ ರಾಣಿಬೆನ್ನೂರಿನಲ್ಲಿ ಮೂವರು ಆರೋಪಿಗಳನ್ನು ಬಸ್ ಸಹಿತ ವಶಕ್ಕೆ ವಶಕ್ಕೆ ತೆಗೆದುಕೊಂಡು ಉಡುಪಿಗೆ ಕರೆತಂದು ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಉಡುಪಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download   Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin