ಬಸ್ ಚಾಲನೆ ಮಾಡಿ, ಚಾಲಕ ಮತ್ತು ವಿದ್ಯಾರ್ಥಿಗಳ ರಕ್ಷಿಸಿದ ಬಾಲಕಿ..!

ಈ ಸುದ್ದಿಯನ್ನು ಶೇರ್ ಮಾಡಿ

School-Girl--01

ರಿಯಾದ್(ಸೌದಿ ಅರೇಬಿಯಾ), ಮೇ 12- ಶಾಲಾ ಬಸ್ ಚಾಲಕ ಪ್ರಜ್ಞೆ ತಪ್ಪಿದಾಗ, ಸಮಯಪ್ರಜ್ಞೆಯಿಂದ ಬಾಲಕಿಯೊಬ್ಬಳು ವಾಹನವನ್ನು ಚಾಲನೆ ಮಾಡಿ ಅಪಘಾತ ತಪ್ಪಿಸಿ ವಿದ್ಯಾರ್ಥಿಗಳನ್ನು ರಕ್ಷಿಸಿದ ಘಟನೆ ಸೌದಿ ಅರೇಬಿಯಾದ ರಿಯಾದ್‍ನಲ್ಲಿ ವರದಿಯಾಗಿದೆ.  ಶಾಲಾ ಬಸ್ಸೊಂದು ವಿದ್ಯಾರ್ಥಿನಿಯರನ್ನು ಮನೆಗೆ ಕರೆದೊಯ್ಯುತ್ತಿತ್ತು. ಈ ಸಂದರ್ಭದಲ್ಲಿ ಚಾಲಕ ಪ್ರಜ್ಞಾಶೂನ್ಯನಾದ.ಅಪಾಯವನ್ನು ಗ್ರಹಿಸಿದ ಅಶ್ವಖ್ ಅಲ್ ಶಮ್ರಿ ಎಂಬ ಬಾಲಕಿ ತಕ್ಷಣ ಬಸ್ಸನ್ನು ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ಸಂಭವಿಸಬಹುದಾದ ಅಪಘಾತವನ್ನು ತಪ್ಪಿಸಿ ಚಾಲಕ ಮತ್ತು ವಿದ್ಯಾರ್ಥಿಗಳನ್ನು ಪಾರು ಮಾಡಿದಳು ಎಂದು ಅನ್ಜಾ ಆನ್‍ಲೈನ್ ಪತ್ರಿಕೆ ವರದಿ ಮಾಡಿದೆ. ಈ ಬಾಲಕಿ ಸುರಕ್ಷತೆಯಿಂದ ಚಾಲಕನನ್ನು ಅದೇ ಬಸ್ಸಿನಲ್ಲಿ ಆಸ್ಪತ್ರೆಗೆ ಕರೆದೊಯ್ದು ಆತನ ಜೀವ ಉಳಿಸಿದ್ದಾಳೆ. ಅಶ್ವಖ್‍ಳ ಸಮಯಜ್ಞಾಗಾಗಿ ಹೈಲ್ ವಿಶ್ವವಿದ್ಯಾಲಯ ಪುರಸ್ಕರಿಸಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin