ಬಸ್ ಡಿಕ್ಕಿ : ತಾಯಿ-ಮಗಳು ಸಾವು
ಈ ಸುದ್ದಿಯನ್ನು ಶೇರ್ ಮಾಡಿ
ಮೈಸೂರು, ಆ.22-ಅತಿ ವೇಗವಾಗಿ ಬಂದ ಸಾರಿಗೆ ಸಂಸ್ಥೆ ಬಸ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಗರ್ಭಿಣಿ ಹಾಗೂ ಒಂದೂವರೆ ವರ್ಷದ ಮಗು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಸಿದ್ಧಾರ್ಥ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಂದು ಬೆಳಗ್ಗೆ ನಡೆದಿದೆ.ಮೈಸೂರು ತಾಲೂಕಿನ ಎನ್.ಸಿ.ಹುಂಡಿ ಗ್ರಾಮದ ಅನುಪಮಾ (26), ಮಗಳು ಒಂದೂವರೆ ವರ್ಷದ ಪೂರ್ವಿ ಮೃತಪಟ್ಟ ದುರ್ದೈವಿಗಳಾಗಿದ್ದು, ಬೈಕ್ ಚಲಾಯಿಸುತ್ತಿದ್ದ ಸ್ವಾಮಿ(35) ಎಂಬುವರು ಗಂಭೀರ ಗಾಯಗೊಂಡಿದ್ದಾರೆ.ಇಂದು ಬೆಳಗ್ಗೆ ಬೈಕ್ನಲ್ಲಿ ಈ ಮೂವರು ಕನಕಗಿರಿಗೆ ಹೋಗುತ್ತಿದ್ದಾಗ ಚಾಮುಂಡಿ ಬೆಟ್ಟದ ತಪ್ಪಲಿನ ಬಳಿ ಗುಂಡ್ಲುಪೇಟೆಗೆ ತೆರಳುತ್ತಿದ್ದ ಸರ್ಕಾರಿ ಬಸ್ ಬೈಕ್ಗೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
► Follow us on – Facebook / Twitter / Google+
Facebook Comments