ಬಸ್ ನಿಲ್ದಾಣಗಳ ಮೇಲೆ ಸಾಧನೆಗಳ ಜಾಹೀರಾತು : ಸರ್ಕಾರಕ್ಕೆ ಬಿಬಿಎಂಪಿ ನೋಟಿಸ್

ಈ ಸುದ್ದಿಯನ್ನು ಶೇರ್ ಮಾಡಿ

aDDS--01

ಬೆಂಗಳೂರು, ಸೆ.26- ಬಸ್ ನಿಲ್ದಾಣಗಳ ಮೇಲೆ ಜಾಹೀರಾತು ಶುಲ್ಕ ನೀಡದೆ ಸರ್ಕಾರದ ಸಾಧನೆಗಳ ಪ್ರಚಾರಕ್ಕೆ ಬಳಸಿಕೊಂಡ ರಾಜ್ಯ ಸರ್ಕಾರಕ್ಕೆ 13 ಕೋಟಿ ಜಾಹೀರಾತು ಶುಲ್ಕ ಪಾವತಿಸುವಂತೆ ಬಿಬಿಎಂಪಿ ನೋಟಿಸ್ ಜಾರಿ ಮಾಡಿದೆ. ಬಸ್ ಶೆಲ್ಟರ್‍ಗಳು ಬಿಬಿಎಂಪಿ ಮಾಲಿಕತ್ವಕ್ಕೆ ಒಳಪಡುತ್ತವೆ. ಸರ್ಕಾರ ಈ ಶೆಲ್ಟರ್‍ಗಳನ್ನು ಅನ್ನಭಾಗ್ಯ, ಇಂದಿರಾ ಕ್ಯಾಂಟಿನ್ ಮತ್ತಿತರ ಯೋಜನೆಗಳ ಜಾಹೀರಾತು ಹಾಕಲು ಬಳಸಿಕೊಂಡಿದೆ. ಬಿಬಿಎಂಪಿ ಆಸ್ತಿಯಲ್ಲಿ ಯಾರೇ ಜಾಹೀರಾತು ಹಾಕಿದರೂ ಅದಕ್ಕೆ ಶುಲ್ಕ ನೀಡಬೇಕು. ಆದರೆ, ರಾಜ್ಯ ಸರ್ಕಾರ ಶುಲ್ಕ ಪಾವತಿಸದೆ ಬಸ್ ಶೆಲ್ಟರ್‍ಗಳನ್ನು ತನ್ನ ಯೋಜನೆಗಳ ಪ್ರಚಾರಕ್ಕೆ ಬಳಸಿಕೊಂಡಿತ್ತು.

ಈ ಬಗ್ಗೆ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್.ರಮೇಶ್ ದೂರು ನೀಡಿ ಸರ್ಕಾರ ಆದರೇನಂತೆ ಪಾಲಿಕೆಯ ಆಸ್ತಿಯನ್ನು ಬಳಸಿಕೊಂಡಿರುವುದರಿಂದ ಶುಲ್ಕ ಪಾವತಿಸಬೇಕು ಎಂದು ಒತ್ತಾಯಿಸಿದ್ದರು.  ಎನ್.ಆರ್.ರಮೇಶ್ ಅವರ ದೂರಿನಿಂದ ಎಚ್ಚೆತ್ತುಕೊಂಡ ಬಿಬಿಎಂಪಿ ಜಾಹಿರಾತು ವಿಭಾಗದ ಸಹಾಯಕ ಆಯುಕ್ತರು ಸರ್ಕಾರಕ್ಕೆ, ವಾರ್ತಾ ಇಲಾಖೆಗೆ ನೋಟಿಸ್ ಜಾರಿ ಮಾಡಿದ್ದಾರೆ.  ಈ ಕೂಡಲೇ 13 ಕೋಟಿ ರೂ. ಶುಲ್ಕವನ್ನು ಪಾವತಿಸಬೇಕು ಎಂದು ಎಚ್ಚರಿಕೆ ನೀಡಿದ್ದಾರೆ. ಹಾಗಾಗಿ ಸರ್ಕಾರ ಅನಿವಾರ್ಯವಾಗಿ 13 ಕೋಟಿ ರೂ. ಜಾಹೀರಾತು ಶುಲ್ಕ ಪಾವತಿಸುವ ಅನಿವಾರ್ಯತೆಗೆ ಸಿಲುಕಿದೆ.

Facebook Comments

Sri Raghav

Admin