ಬಸ್ ನಿಲ್ದಾಣದಲ್ಲಿ ಪ್ರಯಾಣಿಕರೊಬ್ಬರ ಒಂದೂವರೆ ಲಕ್ಷ ಕಳವು

ಈ ಸುದ್ದಿಯನ್ನು ಶೇರ್ ಮಾಡಿ

traveling--person

ದಾವಣಗೆರೆ, ಅ.17- ಹುಬ್ಬಳ್ಳಿಗೆ ತೆರಳುತ್ತಿದ್ದ ಪ್ರಯಾಣಿಕರೊಬ್ಬರ ಬ್ಯಾಗ್‍ನಲ್ಲಿದ್ದ ಒಂದೂವರೆ ಲಕ್ಷ ರೂ.ಗಳನ್ನು ಕಳ್ಳತನ ಮಾಡಿರುವ ಘಟನೆ ಹರಪನಹಳ್ಳಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ನಡೆದಿದೆ.ಪಟ್ಟಣದ ನಂದಿ ಆಫ್‍ಸೆಟ್ ಪ್ರಿಂಟಿಂಗ್ ಪ್ರೆಸ್ ಮಾಲೀಕ ಎನ್.ಎಂ.ಗುರುಬಸವರಾಜ್ ಎಂಬುವರ ಒಂದೂವರೆ ಲಕ್ಷ ಕಳುವಾಗಿದ್ದು, ಇವರು ತಮ್ಮ ಪ್ರಿಂಟಿಂಗ್ ಪ್ರೆಸ್‍ಗೆ ಸಂಬಂಧಿಸಿದ ಸಾಮಗ್ರಿಗಳನ್ನು ತರಲು ಹುಬ್ಬಳ್ಳಿಗೆ ತೆರಳಿದ್ದರು.  ಈ ಸಂದರ್ಭದಲ್ಲಿ ಹರಪನಹಳ್ಳಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ದುಷ್ಕರ್ಮಿಗಳು ಅವರಿಗೆ ಅರಿವಿಲ್ಲದೆಯೇ ಬ್ಯಾಗನ್ನು ಚಾಕುವಿನಿಂದ ಕತ್ತರಿಸಿ ಒಂದೂವರೆ ಲಕ್ಷ ರೂ. ಕಸಿದು ಪರಾರಿಯಾಗಿದ್ದಾರೆ.ಬ್ಯಾಗ್‍ನಲ್ಲಿ ದುಡ್ಡಿಲ್ಲದೆ ಇರುವುದನ್ನು ಗಮನಿಸಿದ ಬಸವರಾಜ್ ಆತಂಕಕ್ಕೊಳಾದರು. ತಕ್ಷಣ ಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

 

► Follow us on –  Facebook / Twitter  / Google+

Facebook Comments

Sri Raghav

Admin