ಬಹುಮತ ಪರೀಕ್ಷೆಗೂ ಮೊದಲು ಗೌಡರ ಆಶೀರ್ವಾದ ಪಡೆದ ಕುಮಾರಸ್ವಾಮಿ

ಈ ಸುದ್ದಿಯನ್ನು ಶೇರ್ ಮಾಡಿ

HDK-Kumaraswamy--01

ಬೆಂಗಳೂರು,ಮೇ 25- ವಿಧಾನಸಭೆ ಅಧಿವೇಶನಕ್ಕೆ ತೆರಳುವ ಮುನ್ನ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಇಂದು ಬೆಳಗ್ಗೆ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರ ನಿವಾಸಕ್ಕೆ ತೆರಳಿ ತಂದೆ-ತಾಯಿ ಆಶೀರ್ವಾದ ಪಡೆದರು. ಪದ್ಮನಾಭನಗರದ ದೇವೇಗೌಡರ ನಿವಾಸಕ್ಕೆ ತೆರಳಿದ ಕುಮಾರಸ್ವಾಮಿ ಅವರು ತಂದೆ-ತಾಯಿಯರ ಆಶೀರ್ವಾದ ಹಾಗೂ ಮಾರ್ಗದರ್ಶನ ಪಡೆದು ಹಿಂದಿರುಗಿದರು.

ಜೆಡಿಎಸ್ ಶಾಸಕರ ಸಭೆ:
ನಂತರ ಗೃಹ ಕಚೇರಿ ಕೃಷ್ಣದಲ್ಲಿ ಜೆಡಿಎಸ್ ಶಾಸಕರೊಂದಿಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಸಭೆ ನಡೆಸಿದರು. ವಿಶ್ವಾಸಮತ ಯಾಚನೆ ಹಿನ್ನೆಲೆಯಲ್ಲಿ ರೆಸಾರ್ಟ್‍ನಿಂದ ನಗರಕ್ಕೆ ಆಗಮಿಸಿರುವ ಜೆಡಿಎಸ್ ಶಾಸಕರೊಂದಿಗೆ ಇಂದು ಸಭೆ ನಡೆಸಿ ಜೆಡಿಎಸ್ ಹಾಗೂ ಕಾಂಗ್ರೆಸ್‍ನಿಂದ ಸ್ಪೀಕರ್ ಚುನಾವಣೆ ಸ್ಪರ್ಧಿಸಿರುವ ರಮೇಶ್‍ಕುಮಾರ್ ಅವರಿಗೆ ಮತ ನೀಡುವಂತೆ ಸೂಚಿಸಿದರು. ಎಲ್ಲರೂ ಒಟ್ಟಾಗಿದ್ದು , ವಿಶ್ವಾಸ ಮತ ಗಳಿಕೆಗೆ ಅವಕಾಶ ನೀಡುವಂತೆ ಸಲಹೆ ಮಾಡಿದರು.

Facebook Comments

Sri Raghav

Admin