ಬಾಂಬ್ ಬೆಲ್ಟ್ ಸಮೇತ ಸಿಕ್ಕಿ ಬಿದ್ದ 12 ವರ್ಷದ ಸುಸೈಡ್ ಬಾಂಬರ್

ಈ ಸುದ್ದಿಯನ್ನು ಶೇರ್ ಮಾಡಿ

Bomber

ಬಾಗ್ದಾದ್ . ಆ.24 : ಐಸಿಸ್ ಉಗ್ರರ ಮತ್ತೊಂದು ಟಾರ್ಗೆಟ್ ಮಿಸ್ ಆಗಿದೆ. ಪೊಲೀಸರ ಎಚ್ಚರಿಕೆಯ ನಡೆ ನೂರಾರು ಜನರ ಪ್ರಾಣಗಳನ್ನು ಉಳಿಸಿದೆ. ಬಾಲಕನೊಬ್ಬ ಟರ್ಕಿಯ ಮದುವೆ ಸಮಾರಂಭದಲ್ಲಿ ತನ್ನನ್ನು ತಾನು ಸ್ಪೋಟಿಸಿಕೊಂಡು 51 ಮಂದಿಯ ಸಾವಿಗೆ ಕಾರಣನಾಗಿದ್ದ ಘಟನೆ ಮಧ್ಯೆ, ಮತ್ತೊಬ್ಬ ಬಾಲಕ ತಾನು ಕಟ್ಟಿಕೊಂಡಿದ್ದ ಬಾಂಬ್ ಸಮೇತ ಪೊಲೀಸರಿಗೆ ಸಿಕ್ಕಿ ಬಿದ್ದಿದ್ದಾನೆ.  ಬಾಗ್ದಾದ್ ನ ಕಿರ್ಕುಕ್ ನಲ್ಲಿ ಬಾರ್ಸಿಲೋನಾ ತಂಡದ ಟೀ ಶರ್ಟ್ ಧರಿಸಿದ್ದ 12 ವರ್ಷದ ಬಾಲಕನೊಬ್ಬ ಅನುಮಾನಾಸ್ಪದ ವರ್ತನೆ ತೋರಿದ್ದಾನೆ. ಆತನ ನಡವಳಿಕೆಯಿಂದ ಸಂಶಯಗೊಂಡ ಪೊಲೀಸರು ಆತನ ಎರಡೂ ಕೈಗಳನ್ನು ಹಿಡಿದು ಟೀ ಶರ್ಟ್ ಬಿಚ್ಚಿದ ವೇಳೆ ಸೊಂಟಕ್ಕೆ ಬಾಂಬ್ ಕಟ್ಟಿಕೊಂಡಿರುವುದು ಕಂಡು ಬಂದಿದೆ.

ಜಾಗರೂಕತೆಯಿಂದ ಆ ಬಾಂಬ್ ಅನ್ನು ಬೇರ್ಪಡಿಸಲಾಗಿದೆ. ವಿಚಾರಣೆ ವೇಳೆ ಬಾಲಕ, ತನ್ನನ್ನು ಐಸಿಸ್ ಉಗ್ರರು ಅಪಹರಿಸಿ ಸೊಂಟಕ್ಕೆ ಬಾಂಬ್ ಕಟ್ಟಿದ್ದಲ್ಲದೇ ಅದನ್ನು ಜನನಿಬಿಡ ಪ್ರದೇಶದಲ್ಲಿ ಸ್ಪೋಟಿಸಿಕೊಳ್ಳಲು ತಿಳಿಸಿದ್ದರು ಎಂಬ ಮಾಹಿತಿ ನೀಡಿದ್ದಾನೆ. ಪೊಲೀಸರ ಸಕಾಲಿಕ ಎಚ್ಚರಿಕೆಯಿಂದ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin