ಬಾಕಿ ಇರುವ 11 ಕ್ಷೇತ್ರಗಳಲ್ಲಿ ಯಾರಿಗೆ ಸಿಗಲಿದೆ ಬಿಜೆಪಿ ಟಿಕೆಟ್..?

ಈ ಸುದ್ದಿಯನ್ನು ಶೇರ್ ಮಾಡಿ

BJP--01
ಬೆಂಗಳೂರು,ಏ.21-ತೀವ್ರ ಸವಾಲಾಗಿ ಕಗ್ಗಂಟಾಗಿ ಪರಿಣಮಿಸಿರುವ 11 ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಯಾವುದೇ ಕ್ಷಣಗಳಲ್ಲಿ ತನ್ನ ಹುರಿಯಾಳುಗಳನ್ನು ಪ್ರಕಟಿಸುವ ಸಾಧ್ಯತೆ ಇದೆ. ನಿನ್ನೆ ಬಿಡುಗಡೆ ಮಾಡಿದ ಮೂರನೇ ಪಟ್ಟಿಯಲ್ಲಿ 57 ಅಭ್ಯರ್ಥಿಗಳ ಹೆಸರುಗಳನ್ನು ಮಾತ್ರ ಘೋಷಿಸಲಾಗಿತ್ತು. ಈಗ ಸದ್ಯಕ್ಕೆ 213 ಕ್ಷೇತ್ರಗಳು ಅಂತಿಮಗೊಂಡಿದ್ದರೂ 11 ಕ್ಷೇತ್ರಗಳಿಗೆ ಯಾರನ್ನು ಕಣಕ್ಕಿಳಿಸಬೇಕೆಂಬುದೇ ತಲೆ ನೋವಾಗಿ ಪರಿಣಮಿಸಿದೆ.

ಬೆಂಗಳೂರಿನ ಯಶವಂತಪುರ, ಬಿಟಿಎಂ ಲೇಔಟ್, ಮೈಸೂರಿನ ವರುಣಾ, ಬಾಗಲಕೋಟೆಯ ಬಾದಾಮಿ, ಹಾಸನ, ಸಕಲೇಶಪುರ, ಬೇಲೂರು, ಶಿಡ್ಲಘಟ್ಟ ಸೇರಿದಂತೆ ಒಟ್ಟು 11 ಕ್ಷೇತ್ರಗಳಿಗೆ ಅಭ್ಯರ್ಥಿಗಳ ಹೆಸರು ಅಂತಿಮಗೊಳಿಸುವುದು ಬಾಕಿ ಉಳಿದಿದೆ. ಇದರಲ್ಲಿ ಪ್ರಮುಖವಾಗಿ ಯಶವಂತಪುರದಿಂದ ಚಿಕ್ಕಮಗಳೂರು- ಉಡುಪಿ ಲೋಕಸಭಾ ಸದಸ್ಯೆ ಶೋಭಾ ಕರಂದ್ಲಾಜೆಗೆ ಟಿಕೆಟ್ ನೀಡಬೇಕೆ ಬೇಡವೇ ಎಂಬುದು ಇನ್ನು ಗೊಂದಲದಲ್ಲೆ ಇದೆ. ಇದೇ ರೀತಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪನವರ ಪುತ್ರ ಬಿ.ವೈ.ವಿಜಯೇಂದ್ರ ವರುಣಾ ಕ್ಷೇತ್ರದಲ್ಲಿ ಕಣಕ್ಕಿಳಿಸುವ ಬಗ್ಗೆಯೂ ಗೊಂದಲ ಮುಂದುವರೆದಿದೆ.
ಉಳಿದಂತೆ ಬಿಟಿಎಂ ಲೇಔಟ್ ಹಾಸನ, ಸಕಲೇಶಪುರ, ಬಾದಾಮಿ, ಭದ್ರಾವತಿ, ರಾಮನಗರ, ಕನಕಪುರ ಕ್ಷೇತ್ರಗಳಿಗೆ ಕೊನೆ ಕ್ಷಣದಲ್ಲಿ ಟಿಕೆಟ್ ಘೋಷಣೆಯಾಗುವ ಸಂಭವವಿದೆ.

ಬಿಟಿಎಂ ಲೇಔಟ್‍ನಲ್ಲಿ ಬಿಜೆಪಿಯಿಂದ ಲಲ್ಲೇಶ್ ರೆಡ್ಡಿ , ವಿವೇಕ್ ರೆಡ್ಡಿ ನಡುವೆ ಸ್ಪರ್ಧೆ ಏರ್ಪಟ್ಟಿದೆ. ರಾಮನಗರದಲ್ಲಿ ತೇಜಸ್ವಿನಿ ರಮೇಶ್‍ಗೌಡ, ಕನಕಪುರದಲ್ಲಿ ನಂದಿನಿ ಗೌಡ, ಬಾದಾಮಿಯಲ್ಲಿ ಮಾ.ಮಾದಪುರ, ಹಾಸನದಿಂದ ಪ್ರೀತಂಗೌಡ, ಭದ್ರಾವತಿಯಿಂದ ಪ್ರವೀಣ್‍ಕುಮಾರ್ ಕಣಕ್ಕಿಳಿಯುವ ಸಂಭವವಿದೆ.
ಉಳಿದ ಅಭ್ಯರ್ಥಿಗಳ ಬಿಜೆಪಿ ಪಟ್ಟಿ:
ಯಶವಂತಪುರ -ಶೋಭಾ ಕರಂದ್ಲಾಜೆ
ವರುಣಾ – ಬಿ.ವೈ.ವಿಜಯೇಂದ್ರ
ಬಿಟಿಎಂ ಲೇಔಟ್- ಲಲ್ಲೇಶ್ ರೆಡ್ಡಿ
ಕನಕಪುರ – ತೇಜಸ್ವಿನಿ ರಮೇಶ್‍ಗೌಡ
ರಾಮನಗರ -ನಂದಿನಿ ಗೌಡ
ಹಾಸನ – ಪ್ರೀತಂ ಗೌಡ
ಸಕಲೇಶಪುರ – ಸೋಮಶೇಖರ್
ಬೇಲೂರು -ಕಲ್ಲಹಳ್ಳಿ ಸುರೇಶ್
ಬಾದಾಮಿ -ಮಾ. ಮಾದಪುರ
ಭದ್ರಾವತಿ – ಪ್ರವೀಣ್‍ಕುಮಾರ್
ಶಿಡ್ಲಘಟ್ಟ – ಶಿವಕುಮಾರ್ ಗೌಡ

Facebook Comments

Sri Raghav

Admin