ಬಾಕಿ ಹಣ ಕೇಳಿದ್ದಕ್ಕೆ ವ್ಯಕ್ತಿ ಹತ್ಯೆ

ಈ ಸುದ್ದಿಯನ್ನು ಶೇರ್ ಮಾಡಿ

murder

ಕೊಪ್ಪಳ, ಆ.30- ಬಾಕಿ ಹಣ ಕೇಳಿದ್ದಕ್ಕೆ ಮನೆಗೆ ನುಗ್ಗಿ ವ್ಯಕ್ತಿಯೊಬ್ಬರನ್ನು ಹತ್ಯೆ ಮಾಡಿರುವ ಘಟನೆ ತಾಲ್ಲೂಕಿನ ಹನಕುಂಟಿ ಗ್ರಾಮದಲ್ಲಿ ನಡೆದಿದೆ.ಹತ್ಯೆಯಾದವನನ್ನು ಈರಣ್ಣ ರಡ್ಡೇರ್ (45) ಎಂದು ತಿಳಿದು ಬಂದಿದ್ದು, ಈತನ ಸ್ನೇಹಿತ ಹನುಮಂತ ತಳವಾರನನ್ನು ಬಂಧಿಸಲಾಗಿದೆ.ಈರಣ್ಣ ಗ್ರಾಮದಲ್ಲಿ ಕಿರಾಣಿ ಅಂಗಡಿ ಇಟ್ಟುಕೊಂಡಿದ್ದು, ಆರೋಪಿ ಅಲ್ಲಿಗೆ ಹನುಮಂತ ಆಗಾಗ ಬಂದು ಸಾಮಾನು ತೆಗೆದುಕೊಂಡು ಹೋಗುತ್ತಿದ್ದ. ಹಣ ಕೇಳಿದರೆ ಸಾಲ ಬರೆದು ಕೋ ಎಂದು ಹೇಳಿತ್ತಿದ್ದ.

ನಿನ್ನೆ ಇದೇ ರೀತಿ ಅಂಗಡಿಗೆ ಬಂದಿದ್ದಾಗ ಹನುಮಂತನಿಗೆ ಬಾಕಿ ಹಣ ನೀಡು ಇಲ್ಲದಿದ್ದರೆ ಹೋಗು ಎಂದು ಬೈದಿದ್ದಾನೆ. ಇದರಿಂದ ಕೋಪಗೊಂಡಿದ್ದ ಹನುಮಂತ ರಾತ್ರಿ ಈರಣ್ಣನ ಮನೆಗೆ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿದ್ದ. ಮನೆಯವರು ಇದನ್ನು ನೋಡಿ ಆತನನ್ನು ಹಿಡಿಯಲು ಪ್ರಯತ್ನಿಸಿದರೂ ಆತ ಓಡಿ ಹೋಗಿದ್ದ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಯಿತು.ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಅಳವಂಡಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ನಂತರ ಆರೋಪಿಯನ್ನು ಸೆರೆ ಹಿಡಿದಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin