ಬಾಕ್ಸಿಂಗ್ ಟೆಸ್ಟ್ ದಿನಾಂಕ ನಿರ್ಧರಿಸದಿದ್ದರೆ ದ.ಆಫ್ರಿಕಾ ಆಟಗಾರರ ಅವಧಿ ಕಡಿತ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 10– ದಕ್ಷಿಣ ಆಫ್ರಿಕಾ ಹಾಗೂ ಭಾರತ ವಿರುದ್ಧ ನಡೆಯಲಿರುವ ಬಾಕ್ಸಿಂಗ್ ಟೆಸ್ಟ್ ಗೆ ದಿನಾಂಕವನ್ನು ಪ್ರಕಟಿಸಿದ್ದರೆ ಐಪಿಎಲ್‍ನಲ್ಲಿ ಪಾಲ್ಗೊಂಡಿರುವ ದಕ್ಷಿಣ ಆಫ್ರಿಕಾದ ಆಟಗಾರರ ಸೇವೆಯನ್ನು ಕಡಿತಗೊಳಿಸಲಾಗುವುದು ಎಂದು ದಕ್ಷಿಣ ಆಫ್ರಿಕಾದ ಕ್ರಿಕೆಟ್  ಮಂಡಳಿಯ ಮುಖ್ಯ ಕಾರ್ಯಕಾರಿ ಹಾರೋನ್ ಲೋರ್‍ಗಾಟ್ ತಿಳಿಸಿದ್ದಾರೆ.  ಬಾಕ್ಸಿಂಗ್ ಡೇ ಟೆಸ್ಟ್ ಬಗ್ಗೆ ಈಗಾಗಲೇ ಬಿಸಿಸಿಐಗೆ ಪತ್ರ ಬರೆದಿದ್ದು ಈ ಕುರಿತು ಈವರೆವಿಗೂ ಯಾವುದೇ ಪ್ರತಿಕ್ರಿಯೆ ಬಂದಿಲ್ಲದ ಕಾರಣ ಲೋರ್‍ಗಾಟ್ ಮೇಲಿನಂತೆ ಪ್ರತಿಕ್ರಿಯಿಸಿದ್ದಾರೆ.ಮೂಲಗಳ ಪ್ರಕಾರ ಭಾರತ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧ ಬಾಕ್ಸಿಂಗ್ ಡೇ ಟೆಸ್ಟ್ ಜನವರಿಯ ಆರಂಭದಲ್ಲೇ ನಡೆಯಲಿದೆ ಎಂದು ತಿಳಿದು ಬಂದಿದೆ.
ಐಸಿಸಿ ಹಾಗೂ ಬಿಸಿಸಿಐ ನಡುವೆ ನಡೆದ ಆದಾಯ ತಾರತಮ್ಯದ ವೇಳೆ ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯು ಬಿಸಿಸಿಐ ವಿರುದ್ಧ ಮತ ಹಾಕಿರುವುದರಿಂದ ಇದುವರೆವಿಗೂ ಬಾಕ್ಸಿಂಗ್ ಡೇ ಟೆಸ್ಟ್‍ಗೆ ನಿಗದಿಆಗಿಲ್ಲ .  ಐಪಿಎಲ್‍ನ ನಿಯಮದ ಪ್ರಕಾರ ದಕ್ಷಿಣ ಆಫ್ರಿಕಾದ ಆಟಗಾರರ ಒಪ್ಪಂದದ ಅವಧಿ ಮೇ 8ಕ್ಕೆ ಮುಕ್ತಾಯಗೊಳ್ಳಲಿದ್ದು , ಆಟಗಾರರನ್ನು ಮುಂದುವರೆಸಬೇಕಾದರೆ ಬಾಕ್ಸಿಂಗ್ ಡೇ ಕ್ರಿಕೆಟ್‍ಗೆ ಒಪ್ಪಿಗೆ ನೀಡಬೇಕೆಂದು ಹಾರೋನ್ ಲೋರ್‍ಗಾಟ್ ಹೇಳಿದ್ದಾರೆ.
ಐಪಿಎಲ್‍ನಲ್ಲಿ ದಕ್ಷಿಣ ಆಫ್ರಿಕಾದ ಆಟಗಾರರು. ಈಗಾಗಲೇ ಆರ್‍ಸಿಬಿ ತಂಡದಲ್ಲಿ ಪಾಲ್ಗೊಂಡಿದ್ದ ಎಬಿಡಿವಿಲಿಯರ್ಸ್ ಚಾಂಪಿಯನ್ ಟ್ರೋಫಿಯಲ್ಲಿ ಪಾಲ್ಗೊಳ್ಳುವ ಸಲುವಾಗಿ ದಕ್ಷಿಣ ಆಫ್ರಿಕಾಕ್ಕೆ ಪ್ರಯಾಣ ಬೆಳೆಸಿದ್ದಾರೆ.

ಇನ್ನು ಉಳಿದಂತೆ ರೈಸಿಂಗ್ ಪುಣೆಗೆ ಪ್ಲೇಆಫ್ ಆಸೆ ಚಿಗುರಿಸುವ ಇಮ್ರಾನ್ ತಹೀರ್, ಪ್ಲಪ್ ಡು ಪ್ಲೆಸಿಸ್, ಡೆಲ್ಲಿಡೇರ್‍ಡೆವಿಲ್ಸ್‍ನ ಕಿಗಾಸೊ ರಬಾಡ, ಕ್ರಿಸ್ ಮೋರಿಸ್, ಕಿಂಗ್ಸ್ ಇಲೆವೆನ್ ಪಂಜಾಬ್‍ನಲ್ಲಿ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿ ಎರಡು ಶತಕ ಗಳಿಸಿರುವ ಆಶೀಮ್ ಅಮ್ಲಾ , ಡೇವಿಡ್ ಮಿಲ್ಲರ್, ಆರ್‍ಸಿಬಿಯಲ್ಲಿ ಸ್ಥಾನ ಪಡೆದಿರುವ ತರ್ಬೇಜ್ ಸಂಸ್ಸಿ ಅವರ ಒಪ್ಪಂದ ಅವಧಿ ಮುಂದುವರೆಯುವುದೋ ಇಲ್ಲವೋ ಎಂಬ ನಿರ್ಧಾರ ತೂಗೂಯ್ಯಾಲೆಯಲ್ಲಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin