ಬಾಕ್ಸಿಂಗ್ : ಪ್ರೀಕ್ವಾರ್ಟರ್ ಫೈನಲ್‍ಗೆ ಮನೋಜ್‍ಕುಮಾರ್

ಈ ಸುದ್ದಿಯನ್ನು ಶೇರ್ ಮಾಡಿ

sgfasdg

ರಿಯೋ ಡಿ ಜನೈರೋ, ಆ.11- ಭಾರತದ ಭರವಸೆಯ ಬಾಕ್ಸರ್, ಕಾಮನ್‍ವೆಲ್ತ್ ಗೇಮ್ಸ್‍ನ ಚಿನ್ನದ ಪದಕ ವಿಜೇತ ಮನೋನ್‍ಕುಮಾರ್ ಒಲಿಂಪಿಕ್ ಕ್ರೀಡಾಕೂಟದ 64 ಕೆಜಿ ವಿಭಾಗದ ಬಾಕ್ಸಿಂಗ್‍ನಲ್ಲಿ ಪ್ರೀ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.  ನಿನ್ನೆ ರಾತ್ರಿ ಇಲ್ಲಿ ನಡೆದ ರೋಚಕ ಹಣಾಹಣಿಯಲ್ಲಿ ಮನೋಜ್, ಲುಥುವೇನಿಯಾದ ಒಲಿಂಪಿಕ್ ಕಂಚುಪದಕ ವಿಜೇತ ಎವಾಲ್ಡಸ್ ಪೆಟ್ರೌಸ್‍ಕಸ್ ಅವರನ್ನು 2-1ರಲ್ಲಿ ಮಣಿಸಿ, ಪದಕ ಗೆಲ್ಲುವ ಭಾರತದ ಆಸೆಯನ್ನು ಜೀವಂತವಾಗಿರಿಸಿದ್ದಾರೆ.  ಮನೋಜ್‍ಕುಮಾರ್ ಆರಂಭದಲ್ಲಿ ಲುಥುವೇನಿಯಾದ ಬಾಕ್ಸರ್‍ನಿಂದ ಆಕ್ರಮಣಕಾರಿ ಹೊಡೆತವನ್ನು ಎದುರಿಸಿದರಾದರೂ ನಂತರ ಚೇತರಿಸಿಕೊಂಡು ತಿರುಗೇಟು ನೀಡಿದರು.

ಎರಡು ಸುತ್ತುಗಳ ಪ್ರಬಲ ಪೈಪೋಟಿಯಕ್ಕು ಚಾಕಚಾಕ್ಯತೆಯ ಪಂಚ್ ನೀಡಿದ ಭಾರತದ ಬಾಕ್ಸರ್ ವಿಜಯಿಯಾದರು.  ಭಾರತದ ಬಾಕ್ಸರ್‍ಗಳ ರಿಯೋ ಒಲಿಂಪಿಕ್ಸ್‍ನಲಿ ಉತ್ತಮ ಪ್ರದರ್ಶನದೊಂದಿಗೆ ಶುಭಾರಂಭ ಮಾಡಿದ್ದಾರೆ. ನಾಲ್ಕನೇ ದಿನದ ಕ್ರೀಡಕೂಟದಲ್ಲಿ 75 ಕೆಜಿ ವಿಭಾಗದ ಬಾಕ್ಸಿಂಗ್‍ನಲ್ಲಿ ಅಮೆರಿಕದ ಚಾಲ್ರ್ಸ್ ಕಾನ್‍ವೆಲ್‍ರನ್ನು ಮಣಿಸಿ ದಿಕಾಸ್ ಕೃಷ್ಣನ್ ಪ್ರೀ ಕ್ವಾರ್ಟರ್ ಫೈನಲ್ ತಲುಪಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin