ಬಾಗ್ದಾದ್‍ನಲ್ಲಿ ಅವಳಿ ಮಾನವ ಬಾಂಬ್ ಸ್ಪೋಟಕ್ಕೆ 26 ಮಂದಿ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Bagdad--02
ಬಾಗ್ದಾದ್, ಜ.15-ಅವಳಿ ಆತ್ಮಾಹುತಿ ದಾಳಿಗಳಲ್ಲಿ 26 ಮಂದಿ ಮೃತಪಟ್ಟು, ಅನೇಕರು ಗಾಯಗೊಂಡಿರುವ ಘಟನೆ ಇರಾಕ್ ರಾಜಧಾನಿ ಬಾಗ್ದಾದ್‍ನಲ್ಲಿ ಇಂದು ಬೆಳಗ್ಗೆ ನಡೆದಿದೆ. ಕಳೆದ ಮೂರು ದಿನಗಳ ಅವಧಿಯಲ್ಲಿ ನಡೆದ ಎರಡನೇ ಮಾನವ ಬಾಂಬ್ ದಾಳಿ ಇದಾಗಿದೆ. ಎರಡು ದಾಳಿಗಳಲ್ಲಿ 26 ಮಂದಿ ಮೃತಪಟ್ಟು, ಇತರ 90 ಜನರು ಗಾಯಗೊಂಡಿದ್ದಾರೆ ಎಂದು ಪೂರ್ವ ಬಾಗ್ದಾದ್‍ನ ಆರೋಗ್ಯ ಮುಖ್ಯಸ್ಥ ಡಾ.ಅಬ್ದುಲ್ ಘನಿ ಅಲ್-ಸಾದ್ ಹೇಳಿದ್ಧಾರೆ.
ಬಾಗ್ದಾದ್‍ನ ಮಧ್ಯ ಭಾಗದಲ್ಲಿರುವ ತಯ್ಯರನ್ ಚೌಕದಲ್ಲಿ ಇಬ್ಬರು ಮಾನವ ಬಾಂಬರ್‍ಗಳು ತಮ್ಮನ್ನು ತಾವೇ ಸ್ಫೋಟಿಸಿಕೊಂಡರು. ಈ ಆತ್ಮಾಹತ್ಯಾ ದಾಳಿಯಲ್ಲಿ ಸಾವು-ನೋವು ಸಂಭವಿಸಿದೆ ಎಂದು ಸೇನಾಧಿಕಾರಿ ಜನರಲ್ ಸಾದ್ ಮಾನ್ ತಿಳಿಸಿದ್ದಾರೆ.

Facebook Comments

Sri Raghav

Admin