ಬಾಗ್ದಾದ್‍’ನಲ್ಲಿ ಕಾರ್ ಬಾಂಬ್ ಸ್ಫೋಟ : 12 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

car-bomb
ಬಾಗ್ದಾದ್,ಜ.8-ಕಾರ್ ಬಾಂಬ್ ಸ್ಫೋಟದಲ್ಲಿ 12ಕ್ಕೂ ಹೆಚ್ಚು ಮಂದಿ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಇರಾಕ್ ರಾಜಧಾನಿ ಬಾಗ್ದಾದ್‍ನ ಮುಖ್ಯ ತರಕಾರಿ ಮಾರುಕಟ್ಟೆಯ ಪ್ರವೇಶದ್ವಾರದಲ್ಲಿ ಇಂದು ನಡೆದಿದೆ. ಸ್ಫೋಟಕಗಳನ್ನು ತುಂಬಿದ್ದ ಕಾರನ್ನು ಆತ್ಮಾಹುತಿ ಬಾಂಬರ್ ಮಾರುಕಟ್ಟೆಯೊಳಗೆ ನುಗ್ಗಿಸಲು ಪ್ರಯತ್ನಿಸುತ್ತಿದ್ದಾಗ, ಅದನ್ನು ಪ್ರವೇಶದ್ವಾರದಲ್ಲಿ ಗಮನಿಸಿದ ಯೋಧನೊಬ್ಬ ಗುಂಡು ಹಾರಿಸಿದ.

bagdad

ಆದರೆ ಭಯೋತ್ಪಾದಕ ತನ್ನನ್ನು ತಾನು ಸೋಟಿಸಿಕೊಂಡು ಕಾರು ಬಾಂಬ್ ದಾಳಿ ನಡೆಸಿದ.  ಜಮೀಲಾ ಮಾರುಕಟ್ಟೆ ಪ್ರವೇಶ ದ್ವಾರದಲ್ಲಿ ನಡೆದ ಈ ದಾಳಿಯಲ್ಲಿ 12ಕ್ಕೂ ಹೆಚ್ಚು ಮಂದಿ ಮೃತಪಟ್ಟು 35 ಜನ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin