ಬಾಗ್ದಾದ್‍’ನಲ್ಲಿ ಕಾರ್ ಬಾಂಬ್ ಸ್ಫೋಟ : 10 ಮಂದಿ ಸಾವು, 17ಕ್ಕೂ ಹೆಚ್ಚು ಸೈನಿಕರಿಗೆ ಗಾಯ

ಈ ಸುದ್ದಿಯನ್ನು ಶೇರ್ ಮಾಡಿ

Car-Bomb

ಬಾಗ್ದಾದ್, ಅ.18-ಇರಾಕ್‍ನ ಮೊಸುಲ್ ನಗರವನ್ನು ಐಎಸ್ ಉಗ್ರರಿಂದ ವಿಮೋಚನೆಗೊಳಿಸಲು ಸೇನಾಪಡೆಗಳು ಬೃಹತ್ ಸೇನಾ ಕಾರ್ಯಾಚರಣೆ ನಡೆಸಿರುವಾಗಲೇ, ಇತ್ತ ರಾಜಧಾನಿ ಬಾಗ್ದಾದ್‍ನ ಆರ್ಮಿ ಚೆಕ್‍ಪಾಯಿಂಟ್ ಬಳಿ ನಡೆದ ಆತ್ಮಾಹುತಿ ಕಾರ್ ಬಾರ್ ದಾಳಿಯಲ್ಲಿ ನಾಲ್ವರು ಯೋಧರೂ ಸೇರಿದಂತೆ ಕನಿಷ್ಠ 10 ಮಂದಿ ಬಲಿಯಾಗಿದ್ದಾರೆ. ಈ ಸ್ಪೋಟದಲ್ಲಿ 17ಕ್ಕೂ ಹೆಚ್ಚು ಸೈನಿಕರು ಗಾಯಗೊಂಡಿದ್ದಾರೆ. ದಕ್ಷಿಣ ಬಾಗ್ದಾದ್‍ನ ಯೂಸುಫಿಯಾದ ಸೇನೆ ತಪಾಸಣೆ ಕೇಂದ್ರವನ್ನು ಗುರಿಯಾಗಿಟ್ಟುಕೊಂಡು ಉಗ್ರರು ಆತ್ಮಾಹತ್ಯಾ ಕಾರ್ ಬಾಂಬ್ ಸ್ಫೋಟಿಸಿ ಸಾವು-ನೋವಿಗೆ ಕಾರಣರಾಗಿದ್ದಾರೆ ಎಂದು ಭದ್ರತಾಪಡೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ದಾಳಿಗೆ ತಾವು ಕಾರಣರೆಂದು ಇಸ್ಲಾಮಿಕ್ ಸ್ಟೇಟ್ ಉಗ್ರರು ಹೇಳಿಕೊಂಡಿಲ್ಲವಾದರೂ, ಯೂಸುಫಿಯಾ ಪ್ರದೇಶ ಪದೇ ಪದೇ ಐಎಸ್ ಉಗ್ರರ ಆಕ್ರಮಣಕ್ಕೆ ತುತ್ತಾಗುತ್ತಿವೆ. ಇರಾಕ್‍ನ ಎರಡನೇ ಅತಿ ದೊಡ್ಡ ನಗರವಾದ ಮೊಸುಲ್‍ನಿಂದ ಉಗ್ರರನ್ನು ಓಡಿಸಲು ಇರಾಕಿ ಸೇನೆ ಕಾರ್ಯಾಚರಣೆ ಆರಂಭಿಸಿದ ಕೆಲವೇ ಗಂಟೆಗಳಲ್ಲಿ ಈ ಕಾರ್ ಬಾಂಬ್ ಸ್ಫೋಟವಾಗಿದ್ದು, ಮತ್ತಷ್ಟು ಭೀಕರ ಕೃತ್ಯಗಳು ಎಸಗುವ ಆತಂಕ ಉಂಟಾಗಿದೆ.  ಬಾಗ್ದಾದ್‍ನಲ್ಲಿ ಭಾನುವಾರ ಅಂತ್ಯಕ್ರಿಯೆ ಸ್ಥಳದ ಮೇಲೆ ಐಎಸ್‍ನ ಜಿಹಾದಿಗಳು ನಡೆಸಿದ ದಾಳಿಯಲ್ಲಿ ಕನಿಷ್ಠ 36 ಮಂದಿ ಹತರಾಗಿದ್ದು, ಮತ್ತೊಂದು ಸ್ಫೋಟದಲ್ಲಿ ನಾಲ್ವರು ನಾಗರಿಕರು ಬಲಿಯಾಗಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin