ಬಾಗ್ದಾದ್ ನಲ್ಲಿ ಐಎಸ್ ಉಗ್ರರಿಂದ ಕಾರ್ ಬಾಂಬ್ ಸ್ಪೋಟ : 35 ಮಂದಿ ಸಾವು

ಈ ಸುದ್ದಿಯನ್ನು ಶೇರ್ ಮಾಡಿ

Car-Bomb--01

ಬಾಗ್ದಾದ್, ಮೇ 21-ಇರಾಕ್ ರಾಜಧಾನಿ ಬಾಗ್ದಾದ್ ಮತ್ತು ದಕ್ಷಿಣ ಭಾಗದ ಚೆಕ್‍ಪೋಸ್ಟ್ ನಲ್ಲಿ ಇಸ್ಲಾಮಿಕ್ ಸ್ಟೇಟ್ (ಐಎಸ್) ಉಗ್ರರು ನಡೆಸಿದ ಮಾನವ ಬಾಂಬ್ ದಾಳಿಯಲ್ಲಿ 35 ಮಂದಿ ಬಲಿಯಾಗಿದ್ದು, 20ಕ್ಕೂ ಹೆಚ್ಚು ಜನರು ತೀವ್ರ ಗಾಯಗೊಂಡಿದ್ದಾರೆ. ಐಎಸ್ ಉಗ್ರರ ನಿಯಂತ್ರಣದಲ್ಲಿರುವ ಮೊಸುಲ್ ಪಟ್ಟಣವನ್ನು ಮರಳಿ ಪಡೆಯಲು ಇರಾಕಿ ಪಡೆಗಳು ಕಳೆದ ಏಳು ತಿಂಗಳಿನಿಂದ ಪ್ರಯತ್ನ ಮುಂದುವರಿಸಿರುವ ನಡುವೆಯೇ ಮತ್ತೆ ಈ ದಾಳಿ ನಡೆದಿದೆ. ಬಾಗ್ದಾದ್‍ನ ದಕ್ಷಿಣ ಭಾಗದಲ್ಲಿರುವ ಅಬು ರಶೀರ್ ಪ್ರದೇಶದ ಚೆಕ್‍ಪೋಸ್ಟ್ ಮೇಲೆ ಆತ್ಯಾಹತ್ಯಾ ಕಾರ್ ಬಾಂಬ್ ದಾಳಿ ನಡೆದಿದೆ.



ಈ ಕೃತ್ಯದಲ್ಲಿ 34 ಮಂದಿ ಮೃತಪಟ್ಟು, 20ಕ್ಕೂ ಹೆಚ್ಚು ಜನರು ಗಾಯಗೊಂಡರು. ಯೋಧರು ಒಬ್ಬ ಉಗ್ರನನ್ನು ಗುಂಡಿಟ್ಟು ಕೊಂದರು. ಇನ್ನೊಬ್ಬ ತನ್ನನ್ನು ತಾನು ಸ್ಫೋಟಿಸಿಕೊಳ್ಳುವಲ್ಲಿ ಸಫಲನಾದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin