ಬಾಡಿ ತೋರಿಸಿ #HumFitTohIndiaFit ಚಾಲೆಂಜ್ ಸ್ವೀಕರಿಸಿದ ಸಿಂಹ

ಈ ಸುದ್ದಿಯನ್ನು ಶೇರ್ ಮಾಡಿ

Pratap-Simha--01
ಮೈಸೂರು, ಮೇ 25- ಕೇಂದ್ರ ಸಚಿವ ರಾಜವರ್ಧನ್ ರಾಥೋಡ್ ಅವರ ಹಮ್ ಫಿಟ್ ತೋ ಇಂಡಿಯಾ ಫಿಟ್ ಎಂಬ ಸ್ಲೋಗನ್‍ನಿಂದ ಪುಳಕಿತರಾಗಿ ಸಂಸದ ಪ್ರತಾಪ್ ಸಿಂಹ ವರ್ಕ್‍ಔಟ್ ಮಾಡಿ ಜಾಲತಾಣದಲ್ಲಿ ತಮ್ಮ ದೇಹದ ಫೋಟೋವನ್ನು ಪೋಸ್ಟ್ ಮಾಡಿದ್ದು, ಅಭಿಮಾನಿಗಳಿಂದ ಮೆಚ್ಚುಗೆಯ ಮಹಾಪೂರ ಹರಿದುಬಂದಿದೆ.

ಮೊದಲು ನಾವು ದೈಹಿಕವಾಗಿ ಸದೃಢವಾಗಿದ್ದರೆ ದೇಶವೂ ಸದೃಢವಾಗುತ್ತದೆ (ಹಮ್ ಫಿಟ್ ತೋ ಇಂಡಿಯಾ ಫಿಟ್) ಎಂಬ ಕೇಂದ್ರ ಸಚಿವ ರಾಥೋಡ್ ಅವರ ಟ್ವಿಟ್‍ಗೆ ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ , ಪ್ರಧಾನಿ ಮೋದಿ ಸೇರಿದಂತೆ ಹಲವರಿಂದ ಮೆಚ್ಚುಗೆಯ ಸುರಿಮಳೆ ಬಂದಿತ್ತು. ಇದೀಗ ಸಂಸದ ಪ್ರತಾಪ್‍ಸಿಂಹ ಕೂಡ ತಮ್ಮ ದೇಹವನ್ನು ವರ್ಕ್‍ಔಟ್ ಮಾಡಿ ತಾವು ಫಿಟ್ ಆಗಿದ್ದೇನೆ. ನಾಡು ಕಟ್ಟುವಲ್ಲಿ ಸಮರ್ಥರಿದ್ದೇವೆ ಎಂಬರ್ಥದಲ್ಲಿ ವರ್ಕ್‍ಔಟ್ ಮಾಡಿದ ನಂತರದ ತಮ್ಮ ಫೋಟೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಟೋವನ್ನು ನೋಡಿದ ಅಭಿಮಾನಿಗಳು (ಮಹಿಳೆಯರೂ ಸೇರಿದಂತೆ) ನೀವು ರಾಜಕೀಯ ಬಿಟ್ಟು ಸಿನಿಮಾಗೆ ಬನ್ನಿ, ಹೀರೋ ಆಗಿ ಎಂದು ಟ್ವಿಟ್ ಮಾಡಿದ್ದಾರೆ.

Facebook Comments

Sri Raghav

Admin