ಬಾಣಸಿಗನಾಗಿ ಅಮಿರ್ ಖಾನ್

ಈ ಸುದ್ದಿಯನ್ನು ಶೇರ್ ಮಾಡಿ

amir
ಮೇಲಿನ ಸುದ್ದಿ ಹಿರಿಯ ನಟ ಸಂಜಯ್ ದತ್‌ಗೆ ಸಂಬಂಧ ಪಟ್ಟಿದ್ದರೆ, ಈ ಸಿನಿ ಸಮಾ ಚಾರವು ಖ್ಯಾತ ಬಾಣ ಸಿಗ ಸಂಜೀವ್ ಕಪೂರ್ ಕುರಿತದ್ದಾಗಿದೆ. ಇದರ ಸಂಕ್ಷಿಪ್ತ ಸಾರಾಂಶ ಏನೆಂದರೆ ಸೆಲೆಬ್ರಿಟಿ ಚೆಫ್ ಸಂಜೀವ್ ಕಪೂರ್ ತಮ್ಮ ಜೀ ವನ ಚರಿ ತ್ರೆ (ಬಯೋಪಿಕ್) ಕುರಿತು ಸಿನಿಮಾದಲ್ಲಿ ಸೂಪರ್‌ಸ್ಟಾರ್ ಅಮಿರ್ ಖಾನ್ ನಟಿಸಬೇಕೆಂಬ ಹೆಬ್ಬಯಕೆ ಹೊಂದಿದ್ದಾರೆ. ಮುಂಬೈನಲ್ಲಿ ನಡೆದ ಸಮಾರಂಭವೊಂದರಲ್ಲಿ ಸುದ್ದಿಗಾರರು ಕಪೂರ್‌ರನ್ನು ಮಾತಿಗೆಳೆದರು. ಅವರ ಜೀವನ ಚರಿತ್ರೆ ಸಿನಿಮಾ ನಿರ್ಮಾಣದ ಬಗ್ಗೆ ಸಿನಿ ಪತ್ರಕರ್ತರು ಕೆದಕಿದರು. ನನ್ನ ಜೀವನ ಚರಿತ್ರೆ ಕುರಿತ ಸಿನಿಮಾ ನಿರ್ಮಾಣದ ಬಗ್ಗೆ ಮಾತುಕತೆ ನಡೆಯುತ್ತಿದೆ.

ಇದಕ್ಕಾಗಿ ನಾನು ಹೆಚ್ಚಿನ ಕೆಲಸ ಮಾಡಬೇಕಿದೆ. ಜೀವನದಲ್ಲಿ ಸಾಸಬೇಕಾದುದು ಬಹಳ ಇದೆ ಎಂದರು. ಸಿನಿಮಾದಲ್ಲಿ ನಿಮ್ಮ ಪಾತ್ರಕ್ಕೆ ಯಾರೂ ಸೂಕ್ತ ಎಂಬ ಪ್ರಶ್ನೆಗೆ ಇದಕ್ಕೆ ಮಿಸ್ಟರ್ ಪರ್ಫೆಕ್ಟ್ ಅಮಿರ್ ಖಾನ್ ಪರ್ಫೆಕ್ಟ್ ಆಗಿ ಸೂಟ್ ಆಗುತ್ತಾರೆ ಎಂದು ಕಪೂರ್ ನಿಸ್ಸಂಶಯವಾಗಿ ಹೇಳಿದರು. ಪಾಕಶಾಲೆ ಪ್ರವೀಣ ಸಂಜೀವ್ ಕಪೂರ್ ಹೆಸರು ಭಾರತದಲ್ಲಿ ಮನೆಮಾತು. ಖಾನಾ ಖಾಜನಾ ರಿಯಾಲಿಟಿ ಕುಕ್ಕಿಂಗ್ ಶೋ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲೂ ಕಪೂರ್ ಹೆಸರು ಗಳಿಸಿದ್ದಾರೆ. ಅನೇಕ ರಾಷ್ಟ್ರ ಮತ್ತು ವಿಶ್ವ ಪ್ರಶಸ್ತಿ-ಪುರಸ್ಕಾರಗಳಿಗೂ ಕಪೂರ್ ಪಾತ್ರರಾಗಿದ್ದಾರೆ.

► Follow us on –  Facebook / Twitter  / Google+

Facebook Comments

Sri Raghav

Admin