ಬಾನ್ ಕೀ ಮೂನ್ ಉತ್ತರಾಧಿಕಾರಿಯಾಗಲಿದ್ದಾರೆ ಗುಟೆರೆಸ್..?

ಈ ಸುದ್ದಿಯನ್ನು ಶೇರ್ ಮಾಡಿ

UN-secratory

ವಿಶ್ವಸಂಸ್ಥೆ, ಆ.30-ಪೋರ್ಚುಗಲ್ ಮಾಜಿ ಪ್ರಧಾನಿ ಅಂಟೋನಿಯೋ ಗುಟೆರೆಸ್ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಮುಂಚೂಣಿಯಲ್ಲಿದ್ದಾರೆ. ಇಲ್ಲಿ ನಡೆದ ಮೂರನೇ ಸುತ್ತಿನ ಮತದಾನದಲ್ಲಿ ಇವರು ಮುನ್ನಡೆ ಸಾಧಿಸಿದ್ದಾರೆ.  ವಿಶ್ವಸಂಸ್ಥೆಯಲ್ಲಿ ಇಂದು ನಡೆದ 3ನೇ ಸುತ್ತಿನ ಮತದಾನದಲ್ಲಿ ಚಲಾವಣೆಯಾದ 15 ಮತಗಳಲ್ಲಿ 11 ಗುಟೆರೆಸ್ಪಾಲಾಗಿವೆ. ಈ ಹಿಂದೆ ನಡದ ಮತದಾನಗಳಲ್ಲೂ ಇವರು ಮುನ್ನಡೆ ಕಾಯ್ದುಕೊಂಡಿದ್ದರು.  ನಿರಾಶ್ರಿತರಿಗಾಗಿ ವಿಶ್ವಸಂಸ್ಥೆಯ ಹೈಕಮೀಷನರ್ ಆಗಿ 10 ವರ್ಷಗಳ ಸೇವೆ ಸಲ್ಲಿಸಿರುವ ಗುಟೆರೆಸ್, ಬಾನ್ ಕೀ ಮೂನ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ. ಇದರೊಂದಿಗೆ ವಿಶ್ವಸಂಸ್ಥೆ ಮಹಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಮಹಿಳಾ ನಾಯಕಿಯೊಬ್ಬರು ಆಯ್ಕೆಯಾಗುವರೆಂಬ ಆಶಾಭಾವನೆ ಮಸುಕಾಗಿದೆ.

► Follow us on –  Facebook / Twitter  / Google+

Facebook Comments

Sri Raghav

Admin