ಬಾಬಾ ದಂಗಲ್ ಗೆ ದಂಗಾದ ಒಲಿಂಪಿಕ್‌ ಪದಕ ವಿಜೇತ ಆಂಡ್ರಿ ..! (Video)

ಈ ಸುದ್ದಿಯನ್ನು ಶೇರ್ ಮಾಡಿ

BabaRamdev

ನವದೆಹಲಿ. ಜ. 19 : ಬಾಬಾ ರಾಮದೇವ್ ಒಬ್ಬ ಯೋಗ ಪಟು ಎನ್ನುವುದು ಎಲ್ಲರಿಗೂ ಗೊತ್ತು ಆದರೆ ಅವರೊಬ್ಬ ಕುಸ್ತಿ ಪಟುವೂ ಹೌದು ಎನ್ನುವುದನ್ನು ನಿನ್ನೆ ಅವರು ಸಾಬೀತುಪಡಿಸಿದ್ದಾರೆ. 2008ರ ಒಲಿಂಪಿಕ್‌ ರಜತ ಪದಕ ವಿಜೇತ ಆಂಡ್ರಿ ಸ್ಟಾಡ್ನಿಕ್ ಜೊತೆ ಬಾಬಾ ಕುಸ್ತಿಯಾಡಿ ಅಸಲಿ ಕುಸ್ತಿಪಟುಗಳೂ ಕೂಡ ಬೆಚ್ಚಿಬೀಳುವಂತೆ ಮಾಡಿದ್ದಾರೆ. ಹೌದು, 2008 ಇಸವಿಯಲ್ಲಿ ನಡೆದ ಒಲಿಂಪಿಕ್ಸ್ ಸ್ಪರ್ಧೆಯ ಸೆಮಿ ಫೈನಲ್ ಸ್ಪರ್ಧೆಯಲ್ಲಿ ಭಾರತದ ಕುಸ್ತಿ ಪಟು ಸುಶೀಲ್ ಕುಮಾರ್ ಅವರನ್ನು ಪರಾಭವಗೊಳಿಸಿದ್ದ ಉಕ್ರೇನ್ನ ಕುಸ್ತಿ ಪಟು ಆಂಡ್ರಿ ಸ್ಟಾಡ್ನಿಕ್‍ ಅವರಿಗೆ ತನ್ನ ಜತೆ ಸೆಣಸಾಡುವಂತೆ ಯೋಗ ಗುರು ಚಾಲೆಂಜ್ ಮಾಡಿದ್ದರು. ಬಾಬಾ ಸವಾಲಿಗೆ ಅಚ್ಚರಿ ವ್ಯಕ್ತ ಪಡಿಸಿದ್ದ ಆಂಡ್ರಿ ಈ ಸವಾಲನ್ನು ಸ್ವೀಕರಿಸಿ ಬಾಬಾ ಜತೆ ನಿನ್ನೆ ಕಣಕ್ಕಿಳಿದಿದ್ದರು.

ಬಾಬಾ-ಆಂಡ್ರಿ ನಡೆದ ಸ್ನೇಹಪೂರ್ವಕ ಹೋರಾಟದಲ್ಲಿ ಬಾಬಾ ಸ್ಟಾಡ್ನಿಕ್ ವಿರುದ್ಧ 12-0 ಅಂತರದ ಗೆಲುವು ಸಾಧಿಸಿದರು. ಈ ಮೂಲಕ ತಾವು ಯಾವುದರಲ್ಲೂ ಕಮ್ಮಿ ಇಲ್ಲ ಎನ್ನುವುದನ್ನು ಸಾಬೀತುಪಡಿಸಿದ್ದಾರೆ.  Patanjali Powervita Pro Wrestling League (PWL) ಈಪ್ರಚಾರ ನಿಮಿತ್ತ ನಡೆದ ಸ್ಫರ್ಧೆಯಲ್ಲಿ ಸ್ಟಾಡ್ನಿಕ್ ಬಾಬಾಗೆ ಸಹಕರಿಸಿದರು. ಕೇಸರಿ ಚಡ್ಡಿ, ಕಪ್ಪು ಶೂ ಧರಿಸಿ ಕಣಕ್ಕಿಳಿದಿದ್ದ ಬಾಬಾ ಗೆಲುವಿನ ಬಳಿಕ, ಭಾರತ್ ಮಾತಾ ಕಿ ಜೈ, ವಂದೇ ಮಾತರಂ ಎಂದು ಕೂಗಿದರು. ಕುಸ್ತಿಪಟುಗಳಿಗೆ ಬಾಬಾ ರಾಮದೇವ್ ಚಾಲೆಂಜ್ ಮಾಡಿದ್ದು ಇದೇ ಮೊದಲೇನೂ ಅಲ್ಲ. ಕಳೆದ ವರ್ಷ ಹರಿದ್ವಾರದಲ್ಲಿ ತಮ್ಮ ಆಶ್ರಮದ 20ನೇ ವಾರ್ಷಿಕೋತ್ಸವದ ವೇಳೆ ರಾಮದೇವ್ ಅವರು ಸುಶೀಲ್ ಕುಮಾರ್‍ ಅವರಿಗೆ ಚಾಲೆಂಜ್ ಮಾಡಿದ್ದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin