ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆಯ 32 ಉತ್ಪನ್ನಗಳು ಕಳಪೆ

ಈ ಸುದ್ದಿಯನ್ನು ಶೇರ್ ಮಾಡಿ

Baba-Ramadev--01ಹರಿದ್ವಾರ, ಮೇ 30-ಅಲ್ಪಾವಧಿಯಲ್ಲೇ ಅಪಾರ ಜನಪ್ರಿಯತೆ ಪಡೆದಿರುವ ಬಾಬಾ ರಾಮದೇವ್ ಅವರ ಪತಂಜಲಿ ಸಂಸ್ಥೆಯ 32 ಸ್ವದೇಶಿ ಉತ್ಪನ್ನಗಳು ಗುಣಮಟ್ಟ ಪರೀಕ್ಷೆಯಲ್ಲಿ ವಿಫಲವಾಗಿರುವ ಅಂಶವನ್ನು ಹರಿದ್ವಾರ ಆಯುರ್ವೇದ ಮತ್ತು ಯುನಾನಿ ಸಂಸ್ಥೆ ಬಹಿರಂಗಗೊಳಿಸಿದೆ. ಪತಂಜಲಿ ಉತ್ಪನ್ನಗಳೂ ಸೇರಿದಂತೆ ಶೇಕಡ 40ರಷ್ಟು ವಸ್ತುಗಳು ಕೆಳದರ್ಜೆ ಗುಣಮಟ್ಟ ಹೊಂದಿದೆ.2013 ರಿಂದ 2016ರ ಅವಧಿಯಲ್ಲಿ 82 ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಇದರಲ್ಲಿ ಪತಂಜಲಿಯ ದಿವ್ಯ ಆಮ್ಲ ಜ್ಯೂಸ್, ಶಿವ್‍ಲಿಂಗಿ ಬೀಜ ಸೇರಿದಂತೆ 32 ಉತ್ಪನ್ನಗಳು ಉತ್ತಮ ಗುಣಮಟ್ಟ ಹೊಂದಿಲ್ಲ ಎಂಬುದು ಮಾಹಿತಿ ಹಕ್ಕು ಕಾಯ್ದೆ (ಆರ್‍ಟಿಐ) ಅಡಿ ಪಡೆಯಲಾದ ಮಾಹಿತಿಯಿಂದ ತಿಳಿದುಬಂದಿದೆ.  ಪತಂಜಲಿ ಉತ್ಪನ್ನಗಳಲ್ಲಿ ನೀರಿನಲ್ಲಿ ಕರಗಬಲ್ಲ ಹುಳಿಯ ಅಂಶ ನಿಗದಿತ ಪ್ರಮಾಣಕ್ಕಿಂತ ಕಡಿಮೆ ಇರುವುದು ಪತ್ತೆಯಾಗಿದೆ. ಈ ಅಂಶ ಕಡಿಮೆ ಇದ್ದರೆ ಹುಳಿತೇಗು, ಆಸಿಡಿಟಿ ಮುಂತಾದ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಶಿವಲಿಂಗಿ ಬೀಜದಲ್ಲಿ ಶೇ.31.68ರಷ್ಟು ವಿದೇಶಿ ಪದಾರ್ಥಗಳು ಇವೆ ಎಂಬುದು ದೃಢಪಟ್ಟಿದೆ.   ಪತಂಜಲಿ ಸಂಸ್ಥೆಯ ನೆಲ್ಲಿಕಾಯಿ ಜ್ಯೂಸ್ ನಿರ್ದಿಷ್ಟ ಗುಣಮಟ್ಟ ಹೊಂದಿಲ್ಲ ಎಂದು ಕಳೆದ ತಿಂಗಳು ಪಶ್ಚಿಮ ಬಂಗಾಳದ ಸಾರ್ವಜನಿಕ ಸ್ವಾಸ್ಥ್ಯ ಸಂಸ್ಥೆ ನಡೆಸಿದ ಪರೀಕ್ಷೆಯಿಂದ ತಿಳಿದುಬಂದಿತ್ತು. ಬಳಿಕ ಇವುಗಳ ಮಾರಾಟಕ್ಕೆ ಮಿಲಿಟರಿ ಕ್ಯಾಂಟಿನ್ ಸೇರಿದಂತೆ ವಿವಿಧೆಡೆ ನಿಷೇಧ ಹೇರಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin