ಬಾಬು ಜಗಜೀವನರಾಮ್ ಜನ್ಮದಿನ, ಉಪರಾಷ್ಟ್ರಪತಿಯಿಂದ ಪುಷ್ಪ ನಮನ

ಈ ಸುದ್ದಿಯನ್ನು ಶೇರ್ ಮಾಡಿ

Hameed-Ansari

ನವದೆಹಲಿ,ಏ.5-ಹಿರಿಯ ಸ್ವಾತಂತ್ರ್ಯ ಹೋರಾಟಗಾರ , ಮಾಜಿ ಉಪಪ್ರಧಾನಿ ಬಾಬು ಜಗಜೀವನರಾಮ್ ಅವರ 109ನೇ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಅಮೀದ್ ಅನ್ಸಾರಿ ಅವರು ಹಿರಿಯ ಚೇತನಕ್ಕೆ ಪುಷ್ಪ ನಮನ ಸಲ್ಲಿಸಿದರು.   ಈ ಸಂದರ್ಭ ಕೇಂದ್ರ ಸಾಮಾಜಿಕ ನ್ಯಾಯ ಸಬಲೀಕರಣ ಖಾತೆ ಸಚಿವ ತಾವರ್‍ಚಂದ್ ಗೆಲ್ಹೋಟ್ ಅವರು ರಾಜ್‍ಘಾಟ್ ಬಲಿ ಇರುವ ಬಾಬು ಜಗಜೀವರಾಮ್ ಅವರ ಸಮಾಧಿಗೆ ಗೌರವ ನಮನ ಸಲ್ಲಿಸಿದರು.

ಈ ವೇಳೆ ಬಾಬೂಜಿ ಅವರ ಪುತ್ರಿ ಮತ್ತು ಲೋಕಸಭೆ ಮಾಜಿ ಸ್ಪೀಕರ್ ಮೀರಾ ಕುಮಾರ್ ಕೂಡ ಹಾಜರಿದ್ದು , ತಮ್ಮ ತಂದೆಯವರ ಭಾವಚಿತ್ರಕ್ಕೆ ನಮಿಸಿದರು.
ಸಚಿವರಾದ ರಾಮದಾಸ್ ಅತಾವಳೆ ಮತ್ತು ವಿಜಯ್ ಸಂಪ್ಲ ಅವರು ಕೂಡ ಉಪಸ್ಥಿತರಿದ್ದು, ಜಗಜೀವನರಾಮ್ ಅವರು ಈ ದೇಶದ ಅದ್ವಿತೀಯ ದಲಿತ ನಾಯಕ ಎಂದು ಸ್ಮರಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin