ಬಾಯಲ್ಲಿ ನೀರೂರಿಸಿದ ರಾಗಿ ಪಾಯಸ

ಈ ಸುದ್ದಿಯನ್ನು ಶೇರ್ ಮಾಡಿ

ragi--payasa

ಹುಳಿಯಾರು, ಸೆ.23-ಘಮಘಮ ರಾಗಿ ಪಾಯಸ, ರಾಗಿ ಮಸಾಲಾ ರೊಟ್ಟಿ ಹೀಗೆ ಒಂದಲ್ಲ ಎರಡಲ್ಲ ವಿವಿಧ ಬಗೆಯ ರಾಗಿಯಿಂದ ತಯಾರಿಸಿದ ಖಾದ್ಯಗಳು ಜನರಲ್ಲಿ ಬಾಯಲ್ಲಿ ನೀರೂರಿಸಿದವು.ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಡಿ ಕಂದಿಕೆರೆ ಹೋಬಳಿ ತೀರ್ಥಪುರದಲ್ಲಿ ಆಯೋಜಿಸಿದ್ದ ರಾಗಿ ಮೇಳದಲ್ಲಿ ರಾಗಿ ಮಸಾಲ ರೊಟ್ಟಿ, ರಾಗಿಬೊಂಡ, ರಾಗಿಪಾಯಸ, ರಾಗಿಹಪ್ಪಳ, ರಾಗಿನಿಪ್ಪಟ್ಟು, ರಾಗಿಚಕ್ಕುಲಿ ಹೀಗೆ 35 ಕ್ಕೂ ಹೆಚ್ಚು ರಾಗಿ ಖಾದ್ಯ ನೆರೆದಿದ್ದವರ ನಾಲಿಗೆ ರುಚಿ ಹೆಚ್ಚಿಸಿದವು.ಗೌರಿಶಂಕರ ಸಂಘ, ಮೈಲಾರಲಿಂಗೇಶ್ವರ ಸಂಘ, ಶಿವಗಂಗಾ ಸಂಘ, ಶಿವಪಾರ್ವತಿ ಸಂಘ ಹಾಗೂ ಭಾರತಾಂಬೆ ಸಂಘದ ಸದಸ್ಯರು ರಾಗಿ ಖಾದ್ಯಗಳನ್ನು ಸಿದ್ಧಪಡಿಸಿ ತಂದಿದ್ದರು.

ಗಣ್ಯರು, ಸಾರ್ವಜನಿಕರು ರುಚಿಕಟ್ಟಾದ ತಿಂಡಿಗಳನ್ನು ಸವಿದು ಮೆಚ್ಚುಗೆ ವ್ಯಕ್ತಪಡಿಸಿದರು.ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾಧಿಕಾರಿ ಸಿ.ಎಸ್.ಪ್ರಶಾಂತ್ ಮಾತನಾಡಿ ಮಹಿಳೆಯರು ಮನೆಯ ವೈದ್ಯರು. ಆಹಾರದ ಬಗ್ಗೆ ಸಾಮಾನ್ಯ ಅರಿವು ಇದ್ದರೆ ಕುಟುಂಬಸ್ಥರಿಗೆ ಅನಾರೋಗ್ಯ ಆಗದಂತೆ ಎಚ್ಚರವಹಿಸಬಹುದು ಎಂದು ಹೇಳಿದರು.ಕಾರ್ಯಕ್ರಮದ ಅಧ್ಯಕ್ಷ  ತೆಯನ್ನು ತಿರ್ಥಪುರ ಕೇಂದ್ರದ ಸದಸ್ಯೆ ಶಾಂತವೀರಮ್ಮ ವಹಿಸಿದ್ದರು, ಆರೋಗ್ಯ ಇಲಾಖೆ ಪಲ್ಲವಿ, ಕಂದಿಕೆರೆ ಮೇಲ್ವಿಚಾರಕ ಮನುಕುಮಾರ್, ಜ್ಞಾನ ವಿಕಾಸ ಕೇಂದ್ರದ ಸಮನ್ವಯಾಧಿಕಾರಿ ಶಶಿರೇಖಾ, ಲೆಕ್ಕಪರಿಶೋದಕ ಪ್ರಸನ್ನ, ಸೇವಾ ಪ್ರತಿನಿಧಿ ಅಂಬಿಕಾ, ಕಾತ್ಯಾಯಿನಿ, ಭಾಗ್ಯಲಕ್ಷಿ, ಸದಸ್ಯರು ಗ್ರಾಮಸ್ಥರು ಭಾಗವಹಿಸಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin