ಬಾರಮುಲ್ಲಾ ಜಿಲ್ಲೆಯಲ್ಲಿ ಸೇನೆ ಗುಂಡಿಗೆ ಉಗ್ರ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Firing-01

ಶ್ರೀನಗರ,ನ.10– ಉತ್ತರ ಕಾಶ್ಮೀರ ಬಾರಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ ಭಯೋತ್ಪಾದಕರ ನುಸುಳುವಿಕೆ ಯತ್ನವನ್ನು ವಿಫಲಗೊಳಿಸಿರುವ ಭಾರತೀಯ ಸೇನೆ ಉಗ್ರಗಾಮಿಯೊಬ್ಬನನ್ನು ಗುಂಡಿಟ್ಟು ಕೊಂದಿದೆ. ಬಾರಮುಲ್ಲಾದ ರಾಂಪುರ ವಲಯದಲ್ಲಿ ಉಗ್ರರ ಗುಂಪೊಂದು ಒಳನುಸುಳಲು ಯತ್ನಿಸಿತು. ಆದರೆ ಎಚ್ಚೆತ್ತ ಕಾರ್ಯಾಚರಣೆಗಿಳಿದಾಗ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ಓರ್ವ ಉಗ್ರಗಾಮಿ ಹತನಾಗಿದ್ದು , ಭಾರೀ ಪ್ರಮಾಣದ ಶಸ್ತ್ರಾಸ್ತ್ರ ಮದ್ದುಗುಂಡುಗಳನ್ನು ವಶಪಡಿಸಿಕೊಳ್ಳಲಾಗಿದೆ. ನಿನ್ನೆಯೂ ಕೂಡ ಗಡಿಯಲ್ಲಿ ಬಿಎಫ್‍ಎಸ್ ಯೋಧರು ಇಬ್ಬರು ಉಗ್ರಗಾಮಿಗಳನ್ನು ಕೊಂದು ಒಳನುಸುಳುವಿಕೆಯನ್ನು ವಿಫಲಗೊಳಿಸಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin