ಬಾರ್ಡರ್-ಗವಾಸ್ಕರ್ ಟ್ರೋಫಿ, ಮೊದಲ ದಿನವೇ ಕಂಗೆಟ್ಟ ಆಸೀಸ್

ಈ ಸುದ್ದಿಯನ್ನು ಶೇರ್ ಮಾಡಿ

Cricket--01

ಪುಣೆ,ಫೆ.23-ಐತಿಹಾಸಿಕ ಬಾರ್ಡರ್- ಗವಾಸ್ಕರ್ 4 ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ತಂಡ ಆಸ್ಟ್ರೇಲಿಯಾ ವಿರುದ್ಧ ಭಾರತ ಮೇಲುಗೈ ಸಾಧಿಸಿದೆ.   ಮಹಾರಾಷ್ಟ್ರ ಕ್ರಿಕೆಟ್ ಸಂಸ್ಥೆಯ ಕ್ರೀಡಾಂಗಣದಲ್ಲಿ ಇಂದು ಆರಂಭವಾದ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ಮೊದಲು ಬ್ಯಾಟ್ ಆಯ್ಕೆ ಮಾಡಿಕೊಂಡಿತು. ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಡೆವಿಡ್ ವಾರ್ನರ್ ಮತ್ತು ಮ್ಯಾಟ್ ರೆನ್ಷಾ ಜೋಡಿಯು ಮೊದಲನೇ ವಿಕೆಟ್ ಜೊತೆಯಾಟದಲ್ಲಿ 82 ರನ್ ಸೇರಿಸಿದರು.  36 ರನ್ ಪೇರಿಸಿ ತಂಡಕ್ಕೆ ಉತ್ತಮ ಆರಂಭ ನೀಡಿದ ಮ್ಯಾಟ್ ರೆನ್ಷಾ ಗಾಯದ ಸಮಸ್ಯೆಯಿಂದ ಆಟ ನಿಲ್ಲಿಸಿ ಪೆವಿಲಿಯನ್ ತೆರಳಿದರು. ಇದಾದ ಬಳಿಕ ರೆನ್ಷಾ ಬದಲಾಗಿ ಬಂದ ಆಸ್ಟ್ರೇಲಿಯಾ ನಾಯಕ ಸ್ಟೀವನ್ ಸ್ಮಿತ್ ಆಟ ಮುಂದುವರೆಸಿದರು.

ಉಮೇಶ್ ಯಾದವ್ ದಾಳಿಗೆ ಕಂಗೆಟ್ಟ ಕಾಂಗರೂ:

ವೇಗದ ಬೌಲರ್ ಉಮೇಶ್ ಯಾದವ್ ಅವರ ಕರಾರುವಕ್ಕಾದ ಬೌಲಿಂಗ್ (25ಕ್ಕೆ 4)ಗೆ ನಲುಗಿದ ಆಸೀಸ್ ಪಡೆ ಮೊದಲ ದಿನದಲ್ಲೇ ಸರ್ವಪತನ ಕಂಡಿತು. ತಂಡದ ಮೊತ್ತ 82 ರನ್ ಆಗಿದ್ದಾಗ ಡೇವಿಡ್ ವಾರ್ನರ್ 38 ರನ್ ಗಳಿಸಿ ಉಮೇಶ್ ಯಾದವ್ ಬೌಲಿಂಗ್‍ನಲ್ಲಿ ಕ್ಲೀನ್ ಬೋಲ್ಡ್ ಆದರು. ಇದಾದ ಬಳಿಕ ಶಾನ್ ಮತ್ತು ಸ್ಟೀವನ್ ಸ್ಮಿತ್ ಜೋಡಿಯು 2ನೇ ವಿಕೆಟ್ ಜೊತೆಯಾಟದಲ್ಲಿ 37 ರನ್ ಸೇರಿಸಿ ತಂಡಕ್ಕೆ ಅಲ್ಪ ಕಾಣಿಕೆ ನೀಡಿದರು. ತಂಡದ ಮೊತ್ತ 119, ಮಾರ್ಷ್ 16 ರನ್ ಗಳಿಸಿದ್ದಾಗ ಜಯಂತ್ ಯಾದವ್ ಬೌಲಿಂಗ್‍ನಲ್ಲಿ ಕೊಹ್ಲಿಗೆ ಕ್ಯಾಚ್ ನೀಡಿ ನಿರ್ಗಮಿಸಿದರು.
ಮಾರ್ಷ್ ಔಟಾಗುತ್ತಿದ್ದಂತೆ ಕಾಂಗರೂ ಬ್ಯಾಟ್ಸ್‍ಮನ್ ಒಬ್ಬೊಬ್ಬರಾಗಿ ಔಟಾಗಿ ಪೆವಿಲಿಯನ್ ಸೇರಿಕೊಂಡರು. ಮಧ್ಯಮ ಕ್ರಮಾಂಕದ ಬ್ಯಾಟ್ಸ್‍ಮನ್‍ಗಳಿಗೆ ಜಡೇಜ ಶಾಕ್ ನೀಡಿ ಪೆವಿಲಿಯನ್‍ಗಟ್ಟಿದರು. ಮಿಚೆಲ್ ಮಾರ್ಷ್( 4), ಪೀಟರ್ ಹಾಂಡ್ಸ್‍ಕಮ್(22) ಜಡೇಜ ಬೌಲಿಂಗ್‍ನಲ್ಲಿ ಔಟಾದರೆ ಸ್ಮಿತ್(27), ರ್ಯಾನ್ಸೋ(68) ರನ್ ಗಳಿಸಿ ಅಶ್ವಿನ್ ಬೌಲಿಂಗ್‍ನಲ್ಲಿ ಔಟಾದರು.

ಕೆಳಕ್ರಮಾಂಕದ ಬ್ಯಾಟ್ಸ್‍ಮನ್‍ಗಳನ್ನು ಯಾದವ್ ಆಕ್ರಮಣಕಾರಿ ಬೌಲಿಂಗ್‍ನಲ್ಲಿ ಕಟ್ಟಿ ಹಾಕಿದರಲ್ಲದೆ ಇಬ್ಬರು ಬ್ಯಾಟ್ಸ್‍ಮನ್‍ಗಳನ್ನು ಶೂನ್ಯ ಮೊತ್ತಕ್ಕೆ ಔಟ್ ಮಾಡಿದರು. ಅಂತಿಮವಾಗಿ ಆಸೀಸ್ ಮೊದಲ ದಿನದಾಟದ ಅಂತ್ಯಕ್ಕೆ ೯ ವಿಕೆಟ್ ಗಾಲ ನಷ್ಟಕ್ಕೆ ೨೫೬ ರನ್ ಪೇರಿಸಿದೆ .   ಕೊಹ್ಲಿ ಪಡೆ ಸಾಂಘಿಕ ಬೌಲಿಂಗ್ ದಾಳಿ ಮೂಲಕ ಆಸೀಸ್ ತಂಡವನ್ನು ಕಟ್ಟಿ ಹಾಕಿ ಮೇಲುಗೈ ಸಾಧಿಸಿದೆ.   ಭಾರತ ಪರ ಉಮೇಶ್ ಯಾದವ್- 25ಕ್ಕೆ 4, ಜಡೇಜ 59-4, ಅಶ್ವಿನ್ 55ಕ್ಕೆ 2 ಮತ್ತು ಜಯಂತ್ ಯಾದವ್ 50-1 ವಿಕೆಟ್ ಉರುಳಿಸಿದರು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin