ಬಾರ್ಡರ್-ಗವಾಸ್ಕರ್ ಸರಣಿಯ 2 ಟೆಸ್ಟ್ ಪಂದ್ಯಕ್ಕೆ ಚಿನ್ನಸ್ವಾಮಿ ಕ್ರೀಡಾಂಗಣ ಸಜ್ಜು

ಈ ಸುದ್ದಿಯನ್ನು ಶೇರ್ ಮಾಡಿ

Chinnaswamy

ನವದೆಹಲಿ, ಅ. 21- ಆಧುನಿಕ ತಂತ್ರಜ್ಞಾನದೊಂದಿಗೆ ಸಜ್ಜಾಗುತ್ತಿರುವ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವು ಭಾರತ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಲಿರುವ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಎರಡನೇ ಪಂದ್ಯಕ್ಕೆ ಸಜ್ಜಾಗಿದೆ.ಟೆಸ್ಟ್ ಸರಣಿಯ ಬಗ್ಗೆ ಮಾಹಿತಿ ನೀಡಿರುವ ಬಿಸಿಸಿಐ ಮಂಡಳಿಯು ಇದೇ ಮೊದಲ ಬಾರಿಗೆ ರಾಂಚಿ ಹಾಗೂ ಧರ್ಮಶಾಲಾ ಕ್ರಿಕೆಟ್ ಮೈದಾನಗಳು ಟೆಸ್ಟ್ ಪಂದ್ಯಗಳಿಗೆ ಮನ್ನಣೆ ಪಡೆದಿದೆ ಎಂದರು.4 ಪಂದ್ಯಗಳ ಸರಣಿಯು ಮುಂಬರುವ ಫೆಬ್ರುವರಿ 23 ರಿಂದ 27ರವರೆಗೆ ಪುಣೆಯಲ್ಲಿ ನಡೆಯಲಿದ್ದು , ಮಾರ್ಚ್ 4-8ರವರೆಗೆ ಎರಡನೇ ಪಂದ್ಯವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ , ಮಾರ್ಚ್ 16- 20ರವರೆಗೆ ಮೂರನೇ ಪಂದ್ಯವು ರಾಂಚಿ ಹಾಗೂ ಮಾರ್ಚ್ 25- 29ರವರೆಗೆ ನಾಲ್ಕನೆ ಪಂದ್ಯವು ಧರ್ಮಶಾಲಾ ಜರುಗಲಿದೆ.ಕಳೆದ ಬಾರಿ ಆಸ್ಟ್ರೇಲಿಯಾ ಪ್ರವಾಸಗೊಂಡಿದ್ದ ವೇಳೆ ಭಾರತ ತಂಡವು 4-0 ಯಿಂದ ಕ್ಲೀನ್‍ಸ್ವೀಪ್ ಸಾಧಿಸಿತ್ತು.ಈ ಸರಣಿಯು ಸೇರಿದಂತೆ ಭಾರತ ತಂಡವು ಸತತವಾಗಿ ತವರಿನಲ್ಲಿ 13 ಟೆಸ್ಟ್ , 8 ಏಕದಿನ ಹಾಗೂ ಮೂರು ಟ್ವೆಂಟಿ-20 ಪಂದ್ಯಗಳನ್ನು ಆಡಿದಂತಾಗುತ್ತದೆ.

ಬಿಸಿಸಿಐ ಮಂಡಳಿ ಆಡಳಿತಗಾರರ ತವರಿನಲ್ಲೇ ಪಂದ್ಯಗಳು:

ಆಸ್ಟ್ರೇಲಿಯಾ ಹಾಗೂ ಭಾರತ ನಡುವೆ ನಡೆಯುವ ಟೆಸ್ಟ್ ಸರಣಿಯ ಎಲ್ಲಾ ಪಂದ್ಯಗಳು ಬಿಸಿಸಿಐ ಮಂಡಳಿಯ ಅಡಳಿತಗಾರರ ತವರಿನಲ್ಲೇ ನಡೆಯುವುದರಿಂದ ವಿಶಿಷ್ಟ ಪಡೆದುಕೊಂಡಿದೆ.ಬಿಸಿಸಿಐ ಅಧ್ಯಕ್ಷ ಅನುರಾಗ್‍ಠಾಕೋರ್ ಹಿಮಾಚಲ ಪ್ರದೇಶದರಾದರೆ, ಕಾರ್ಯದರ್ಶಿ ಅಜಯ್ ಶಿರ್ಕೆ ಪುಣೆ ಪ್ರಾಂತ್ಯದವರು ಹಾಗೆಯೇ ಜಂಟಿ ಕಾರ್ಯದರ್ಶಿ ಅಮಿತ್ ಚೌದರಿ ರಾಂಚಿ ಮೂಲದವರಾಗಿದ್ದಾರೆ. ಅವರ ತವರೂರಿನಲ್ಲಿ ಪಂದ್ಯಗಳು ನಡೆಯುವುದರಿಂದ ಈ ಸರಣಿ ಮಹತ್ವ ಪಡೆದಿದೆ.

 

► Follow us on –  Facebook / Twitter  / Google+

Facebook Comments

Sri Raghav

Admin