ಬಾರ್‍ನಲ್ಲಿ ಬಿಲ್ ಪಾವತಿ ವಿಚಾರದಲ್ಲಿ ಕೊಲೆ ಮಾಡಿದ್ದ  ಮೂವರು ಅರೆಸ್ಟ್

ಈ ಸುದ್ದಿಯನ್ನು ಶೇರ್ ಮಾಡಿ

Arrestde

ಬೆಂಗಳೂರು, ಮೇ 26- ಬಾರ್‍ನಲ್ಲಿ ಮದ್ಯ ಸೇವಿಸಿದ ನಂತರ ಬಿಲ್ ಪಾವತಿಸುವ ವಿಚಾರಕ್ಕೆ ಜಗಳ ನಡೆದು ಒಬ್ಬನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಚಂದ್ರಾ ಲೇಔಟ್ ಠಾಣೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.  ಮಂಡ್ಯದ ಅರುಣ್‍ಕುಮಾರ್ ಅಲಿಯಾಸ್ ತ್ಯಾಪೆ (37), ರಾಜಾಜಿನಗರ 6ನೆ ಬ್ಲಾಕ್‍ನ ಆಕಾಶ್ ಅಲಿಯಾಸ್ ಕರಿಯ (20) ಮತ್ತು ಚೋಳೂರುಪಾಳ್ಯದ ಚೇತನ್ ಅಲಿಯಾಸ್ ಐಸ್‍ಗೆಡ್ಡೆ ಬಂಧಿತ ಹಂತಕರು.  ಪ್ರಕರಣದಲ್ಲಿ ಇನ್ನೂ ಮೂವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.



ಗಂಗೊಂಡನಹಳ್ಳಿಯ ಬಾರ್‍ವೊಂದರಲ್ಲಿ ಕೊಲೆಯಾದ ಅರುಣ ಅಲಿಯಾಸ್ ವಾಲೆ ಹಾಗೂ ಆರೋಪಿಗಳು ಸಂಜೆಯಿಂದ ರಾತ್ರಿವರೆಗೂ ಮದ್ಯ ಸೇವಿಸಿದ್ದರು.
ರಾತ್ರಿ 10.30ರ ಸುಮಾರಿನಲ್ಲಿ ಬಿಲ್ ಪಾವತಿಸುವ ವಿಚಾರಕ್ಕೆ ಜಗಳ ನಡೆದು ಅರುಣ್‍ಕುಮಾರ್ ಮತ್ತವನ ಸ್ನೇಹಿತರು ಅಡುಗೆ ಮನೆಯಲ್ಲಿದ್ದ ಕುರ್ಪಿಯಿಂದ ಹಲ್ಲೆ ಮಾಡಿ ಅರುಣ್‍ನನ್ನು ಕೊಂದು ಪರಾರಿಯಾಗಿದ್ದರು.  ಈ ಸಂಬಂಧ ಚಂದ್ರಾ ಲೇಔಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin