ಬಾಲಕಿಯನ್ನು ಬಲಿ ಪಡೆದ ಟಿವಿ ಸೀರಿಯಲ್..!

ಈ ಸುದ್ದಿಯನ್ನು ಶೇರ್ ಮಾಡಿ

TV-Serila--01

ದಾವಣಗೆರೆ,ನ.29-ಟಿವಿ ವಾಹಿನಿಯೊಂದರಲ್ಲಿ ಪ್ರಕಟವಾಗುತ್ತಿರುವ ಧಾರಾವಾಹಿಯಲ್ಲಿ ಬರುವ ದೃಶ್ಯವೊಂದನ್ನು ವೀಕ್ಷಿಸಿದ ಬಾಲಕಿ ತಾನೂ ಕೂಡ ಅದೇ ರೀತಿ ಬೆಂಕಿ ಹಚ್ಚಿಕೊಂಡು ನೃತ್ಯ ಮಾಡಲು ಹೋಗಿ ಸಾವನ್ನಪ್ಪಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಜಿಲ್ಲೆಯ ಹರಿಹರ ಪಟ್ಟಣದ ಆಶ್ರಯ ಕಾಲೋನಿಯ ನಿವಾಸಿಗಳಾದ ಚೈತ್ರಾ ಮತ್ತು ಮಂಜುನಾಥ್ ದಂಪತಿಯ ಮಗಳು ಏಳು ವರ್ಷದ ಪ್ರಾರ್ಥನಾ ಸಾವನ್ನಪ್ಪಿರುವ ಬಾಲಕಿ.

ತಂದೆ-ತಾಯಿ ಇಬ್ಬರು ಕೆಲಸಕ್ಕೆ ಹೋಗಿದ್ದು ಮನೆಯಲ್ಲಿ ಯಾರು ಇಲ್ಲದಾಗ ಏಳು ವರ್ಷದ ಪ್ರಾರ್ಥನಾ ಮತ್ತು ಅವಳ ತಂಗಿ ಇಬ್ಬರೇ ಇದ್ದರು. ಆಗ ಟಿವಿ ದೃಶ್ಯ ನೋಡಿ ಪ್ರಚೋದಿತಳಾಗಿದ್ದ ಪ್ರಾರ್ಥನಾ ತನ್ನ ಸುತ್ತ ಪೇಪರ್‍ಗಳನ್ನು ಹಾಕಿ ಅದಕ್ಕೆ ಬೆಂಕಿ ಹಚ್ಚಿ ಅದರ ಮಧ್ಯೆ ನೃತ್ಯ ಮಾಡಲು ಆರಂಭಿಸಿದ್ದಾಳೆ. ಆಗ ಅವಳು ಧರಿಸಿದ್ದ ಬಟ್ಟೆಗೆ ಬೆಂಕಿ ಹೊತ್ತಿಕೊಂಡು ಈ ದುರ್ಘಟನೆ ಸಂಭವಿಸಿದೆ. ಈ ಘಟನೆ ನಡೆದಿರುವುದು ನ.11ರಂದು. ತಾಯಿ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ ಸುಟ್ಟ ಗಾಯಗಳಿಂದ ನರಳುತ್ತಿದ್ದ ಮಗಳನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಲ್ಲಿಯವರೆಗೂ ಚೆನ್ನಾಗಿಯೇ ಇದ್ದ ಪ್ರಾರ್ಥನಾ ಸುಟ್ಟ ಗಾಯಗಳಿಗೆ ಔಷಧಿ ಹಚ್ಚಿದ ನಂತರ ಅತ್ತಿದ್ದಾಳೆ. ಈ ಸಂದರ್ಭ ತಾಯಿಯೊಂದಿಗೆ ಮಾತನಾಡಿದ ಪ್ರಾರ್ಥನಾ ನನಗೇನೂ ಆಗಿಲ್ಲ. ನೀನು ಧೈರ್ಯವಾಗಿರುವ ಅಳಬೇಡ ಎಂದು ತಾಯಿಗೆ ಹೇಳಿದ್ದಾರೆ.

ಹೀಗೇಕೆ ಮಾಡಿದೆ ಎಂದು ತಾಯಿ ಕೇಳಿದಾಗ ಟಿವಿಯಲ್ಲಿ ಬರುವ ಸೀರಿಯಲ್ ನೋಡಿದೆ. ಅದರಲ್ಲಿ ಇದೇ ರೀತಿ ಬೆಂಕಿ ಮಧ್ಯೆ ನೃತ್ಯ ಮಾಡುವ ದೃಶ್ಯ ನೋಡಿ ನಾನು ಕೂಡ ಅದೇ ರೀತಿ ಮಾಡಬೇಕೆಂದು ಆಸೆಪಟ್ಟು ಮಾಡಿದೆ. ನನಗೇನೂ ಆಗುವುದಿಲ್ಲ ಎಂದು ತಾಯಿಗೆ ತಿಳಿಸಿದ್ದಾಳೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿರುವ ಮಗುವಿನ ತಾಯಿ ಚೈತ್ರಾ, ಟಿವಿ ಸೀರಿಯಲ್ಲ ದೃಶ್ಯ ನೋಡಿಯೇ ನನ್ನ ಮಗಳು ಸಾವನ್ನಪ್ಪಿದ್ದಾಳೆ ಎಂದು ತಿಳಿಸಿದ್ದಾರೆ.
ನ.11ರಂದು ಆಸ್ಪತ್ರೆಗೆ ದಾಖಲಾಗಿದ್ದ ಪ್ರಾರ್ಥನಾ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ನ.26ರಂದು ಕೊನೆಯುಸಿರೆಳೆದಿದ್ದಾಳೆ.

Facebook Comments

Sri Raghav

Admin