ಬಾಲಕಿಯರ ಜನನಾಂಗ ವಿರೂಪಗೊಳಿಸಿದ ಭಾರತೀಯ ವೈದ್ಯೆ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

Jamuna--012

ನ್ಯೂಯಾರ್ಕ್, ಏ.14-ಆರರಿಂದ ಎಂಟು ವರ್ಷದ ಬಾಲಕಿಯರ ಜನನಾಂಗಗಳನ್ನು ವಿರೂಪಗೊಳಿಸಿದ ಆರೋಪದ ಮೇಲೆ ಭಾರತೀಯ ಮೂಲದ ಅಮೆರಿಕ ವೈದ್ಯೆಯನ್ನು ಬಂಧಿಸಲಾಗಿದೆ. ಅಮೆರಿಕದಲ್ಲಿ ಇಂಥ ಪ್ರಕರಣ ಇದೇ ಮೊದಲು ಎಂದು ನಂಬಲಾಗಿದ್ದು, ತನಿಖೆ ತೀವ್ರಗೊಂಡಿದೆ.  ಮಿಚಿಗನ್ ನ ಲಿವೊನಿಯಾದ ವೈದ್ಯಕೀಯ ಕಚೇರಿಯೊಂದರಲ್ಲಿ ಅಪ್ರಾಪ್ತೆಯರ ಮೇಲೆ ಗುಪ್ತಾಂಗಗಳನ್ನು ಊನಗೊಳಿಸಿದ (ಫೀಮೇಲ್ ಜೆನಿಟಲರ್ ಮ್ಯುಟಿಲೇಷನ್-ಎಫ್‍ಜಿಎಂ) ಆಪಾದನೆ ಮೇಲೆ ಜಮುನಾ ನಗರವಾಲಾ (48) ಎಂಬ ಮಹಿಳಾ ವೈದ್ಯಯನ್ನು ಪೊಲೀಸರು ಬಂಧಿಸಿದ್ದಾರೆ.

ಹೊರ ರಾಜ್ಯಗಳಿಂದ ಬಂದಿದ್ದ ಬಾಲಕಿಯರ ಜನನಾಂಗಗಳನ್ನು ಜಮುನಾ ವಿರೂಪಗೊಳಿಸಿ ಊನ ಮಾಡಿದ್ದಾರೆ ಎಂದು ದೂರು ನೀಡಲಾಗಿತ್ತು. ಈ ಸಂಬಂಧ ವೈದ್ಯನ್ನು ಬಂಧಿಸಿ ಡೆಟ್ರಾಯಿಟ್‍ನ ಫೆಡರಲ್ ಕೋರ್ಟ್‍ಗೆ ಹಾಜರುಪಡಿಸಲಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin