ಬಾಲಕಿ ಮೇಲೆ ಅತ್ಯಾಚಾರಕ್ಕೆ ಕಾರಣವಾದ ಬ್ಯಾನ್ ಆದ 500 ರೂ.ನೋಟು..!

ಈ ಸುದ್ದಿಯನ್ನು ಶೇರ್ ಮಾಡಿ

Rape-002

ಬರೇಲಿ, ನ.24-ರದ್ದಾದ 500 ರೂ.ನೋಟು ವಿಚಾರವಾಗಿ ನಡೆದ ಜಗಳವೊಂದು ಬಾಲಕಿಯೊಬ್ಬಳ ಮೇಲೆ ಅತ್ಯಾಚಾರಕ್ಕೆ ಕಾರಣವಾದ ಘಟನೆ ಉತ್ತರಪ್ರದೇಶದ ಬದೌಂನಲ್ಲಿ ನಡೆದಿದೆ. ಈ ಜಗಳದಿಂದ ಕುಪಿತನಾದ ಹತ್ತನೇ ತರಗತಿ ವಿದ್ಯಾರ್ಥಿಯೊಬ್ಬ 15 ವರ್ಷದ ಬಾಲಕಿಯನ್ನು ಅಪಹರಿಸಿ ಹತ್ತಿರದ ಹೊಲದಲ್ಲಿ ಅತ್ಯಾಚಾರ ಎಸಗಿದ್ದಾನೆ. ಕುಟುಂಬದ ಸದಸ್ಯರು ಹೊರಗೆ ಹೋಗಿದ್ದಾಗ ಮನೆಯಲ್ಲಿ ಒಬ್ಬಳೇ ಇದ್ದ ಬಾಲಕಿ ಮೇಲೆ ಸೋಮವಾರ ಈ ದುಷ್ಕøತ್ಯ ಎಸಗಲಾಗಿದೆ.

 ಘಟನೆ ವಿವರ:

ಬಾಲಕಿಯ ಕುಟುಂಬದವರು ಸೋಮವಾರ ಬೆಳಿಗ್ಗೆ ಮೂವರು ವ್ಯಕ್ತಿಗಳಿಗೆ ಬೆರಣಿಗಳನ್ನು ಮಾರಾಟ ಮಾಡಿದ್ದರು. ಅವರು 500 ರೂ.ಗಳ ಹಳೆ ನೋಟನ್ನು ನೀಡಿದ ಕಾರಣ ಬಾಲಕಿಯ ತಂದೆ ಅದನ್ನು ಸ್ವೀಕರಿಸಲು ನಿರಾಕರಿಸಿದ್ದರು. ಇದೇ ಕಾರಣಕ್ಕಾಗಿ ಇವರ ನಡುವೆ ಜಗಳವಾಗಿ ಹೊಡೆದಾಟ ನಡೆದಿತ್ತು ಎಂದು ದತ್ತಗಂಜ್ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ರಾಜ್‍ವೀರ್ ಸಿಂಗ್ ತಿಳಿಸಿದ್ದಾರೆ.

ಈ ಘಟನೆ ನಂತರ ಅದೇ ದಿನ ಸಂಜೆ ಹತ್ತನೇ ತರಗತಿ ವಿದ್ಯಾರ್ಥಿಯು ಮನೆಗೆ ನುಗ್ಗಿ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಎಸಗಿದ್ಧಾನೆ. ಹೊರಹೋಗಿದ್ದ ಪೋಷಕರು ಮನೆಗೆ ಬಂದಾಗ ಬಾಲಕಿಯು ತನ್ನ ಮೇಲೆ ನಡೆದ ಅತ್ಯಾಚಾರದ ಬಗ್ಗೆ ತಿಳಿಸಿದಳು.  ಶಾಲೆ ತ್ಯಜಿಸಿರುವ ಬಾಲಕಿಯನ್ನು ವೈದ್ಯಕೀಯ ಪರೀಕ್ಷೆ ಒಳಪಡಿಸಲಾಗಿದೆ. ಜಗಳ ಮಾಡಿದ ಮೂವರಲ್ಲಿ ಒಬ್ಬನ ಪುತ್ರನಾದ ಬಾಲಕನು ದ್ವೇಷದಿಂದ ಈ ಕೃತ್ಯ ಎಸಗಿದ್ದಾನೆ ಎಂದು ಸಿಂಗ್ ತಿಳಿಸಿದ್ದಾರೆ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಾಪತ್ತೆಯಾದವರಿಗೆ ಶೋಧ ಮುಂದುವರಿದಿದೆ.

> ಯಾವ ಸುದ್ದಿಯನ್ನೂ ಮಿಸ್ ಮಾಡ್ಕೋಬೇಡಿ… :  Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin