ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಹೆಡ್‍ಮಾಸ್ಟರ್‍ಗೆ ಹಿಗ್ಗಾಮುಗ್ಗಾ ಥಳಿತ

ಈ ಸುದ್ದಿಯನ್ನು ಶೇರ್ ಮಾಡಿ

Head-Master--02

ಭುವನೇಶ್ವರ, ಡಿ.13- ಶಾಲಾ ಬಾಲಕಿಯರ ಮೇಲೆ ಶಿಕ್ಷಕರೇ ಅತ್ಯಾಚಾರ ಎಸಗುತ್ತಿರುವ ಆತಂಕಕಾರಿ ಪ್ರಕರಣಗಳು ದೇಶದ ವಿವಿಧೆಡೆ ಮತ್ತೆ ಮತ್ತೆ ವರದಿಯಾಗುತ್ತಿವೆ. ಒಡಿಶಾದ ಮಯೂರ್‍ಭಂಜ್ ಜಿಲ್ಲೆಯಲ್ಲಿ 6ನೇ ತರಗತಿ ವಿದ್ಯಾರ್ಥಿನಿಯ ಮೇಲೆ ಶಾಲಾ ಮುಖ್ಯ ಶಿಕ್ಷಕನೇ ಅತ್ಯಾಚಾರ ನಡೆಸಿರುವ ನೀಚ ಘಟನೆ ನಡೆದಿದೆ. ಈ ಹೀನ ಕೃತ್ಯದಿಂದ ಕುಪಿತರಾದ ಸಾರ್ವಜನಿಕರು ಹೆಡ್‍ಮಾಸ್ಟರ್‍ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ.

ಮಯೂರ್‍ಭಂಜ್‍ನ ಶಾಲೆಯೊಂದರ 6ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಕಳೆದ ಒಂದು ತಿಂಗಳಿನಿಂದ ಮುಖ್ಯೋಪಾಧ್ಯಾಯ ಅತ್ಯಾಚಾರ ಎಸಗುತ್ತಿದ್ದ. ಶಾಲೆಯಲ್ಲಿ ನಡೆಯುತ್ತಿದ್ದ ಈ ಕೃತ್ಯ ಬಗ್ಗೆ ವಿದ್ಯಾರ್ಥಿನಿಯು ತಡವಾಗಿ ತನ್ನ ಪೋಷಕರಿಗೆ ತಿಳಿಸಿದ್ದಳು. ಇದರಿಂದ ಕುಪಿತರಾದ ಪೋಷಕರು ಮತ್ತು ಸ್ಥಳೀಯರು ಶಾಲೆಗೆ ನುಗ್ಗಿ ಮುಖ್ಯಶಿಕ್ಷಕನನ್ನು ಹಿಗ್ಗಾಮುಗ್ಗಾ ಥಳಿಸಿ ಆಕ್ರೋಶ ವ್ಯಕ್ತಪಡಿಸಿದರು. ಪೊಲೀಸರು ಆರೋಪಿಯನ್ನು ಮುಖ್ಯಶಿಕ್ಷಕನನ್ನು ಬಂಧಿಸಿ, ಮುಂದಿನ ತನಿಖೆ ಕೈಗೊಂಡಿದ್ದಾರೆ ಎಂದು ಮಯೂರ್‍ಭಂಜ್ ಡಿಎಸ್ಪಿ ವಿ.ಕೆ.ಪಟೇಲ್ ತಿಳಿಸಿದ್ದಾರೆ.

ಡಿಸೆಂಬರ್ 5ರಂದು ಕೋಲ್ಕತಾದ ಬೆಹಾಲಾದಲ್ಲಿ ಮೂರು ವರ್ಷದ ಬಾಲಕಿ ಮೇಲೆ ಬೋಧಕೇತರ ಸಿಬ್ಬಂದಿಯೊಬ್ಬ ಅತ್ಯಾಚಾರ ನಡೆಸಿದ್ದ. ಈ ಸಂಬಂಧ ಮನೋಜ್ ಎಂಬಾತನನ್ನು ಬಂಧಿಸಲಾಗಿತ್ತು. ಕೋಲ್ಕತಾದಲ್ಲೇ ನಡೆದ ಮತ್ತೊಂದು ಘಟನೆಯಲ್ಲಿ ಪ್ರತಿಷ್ಠಿತ ಶಾಲೆಯೊಂದರ ನಾಲ್ಕು ವರ್ಷದ ಮಗುವಿನ ಮೇಲೆ ದೈಹಿಕ ಶಿಕ್ಷಕನೊಬ್ಬ ಅತ್ಯಾಚಾರ ಎಸಗಿದ್ದ ಎಂದು ವರದಿಯಾಗಿತ್ತು.

Facebook Comments

Sri Raghav

Admin