ಬಾಲಿವುಡ್ ನಟಿಯರ ಸೆಕ್ಸಿ ಲುಕ್ ನ ಹಿಂದಿದೆ ಈ ‘ಹಾಟ್ ಯೋಗಿನಿ’ ಚಮತ್ಕಾರ

ಈ ಸುದ್ದಿಯನ್ನು ಶೇರ್ ಮಾಡಿ

Hot--05
ಬಾಲಿವುಡ್‍ನ ಅನೇಕ ಸ್ಟಾರ್‍ಗಳ ಚಿರಯೌವ್ವನದ ಗುಟ್ಟೇ ದೀಪಿಕಾ ಮೆಹ್ತಾ. ಐಶ್ವರ್ಯ ರೈ, ಪ್ರಿಯಾಂಕ ಚೋಪ್ರ, ಬಿಪಾಷ ಬಸು, ದೀಪಿಕಾ ಪಡುಕೋಣೆ, ವಿದ್ಯಾಬಾಲನ್, ಪ್ರೀತಿ ಜಿಂಟಾ ಸೇರಿದಂತೆ ಅನೇಕ ತಾರೆಯರ ಯೋಗ ಗುರು ಈಕೆ. 1997ರಲ್ಲಿ ಈಕೆ ಪರ್ವತಾರೋಹಣ ಮಾಡುತ್ತಿದ್ದಾಗ ಸಂಭವಿಸಿದ ಅಪಘಾತದಲ್ಲಿ ಕೂದಲೆಳೆ ಅಂತರದಿಂದ ಸಾವಿನಿಂದ ಪಾರಾಗಿ ತನಗೆ ಎದುರಾದ ಸವಾಲನ್ನು ಎದುರಿಸಲು ಈಕೆ ಕಂಡುಕೊಂಡ ಮಾರ್ಗ ಯೋಗ. ಅಷ್ಟಾಂಗ ಯೋಗವನ್ನು ಕರಗತ ಮಾಡಿಕೊಂಡು ಇಂದು ದೀಪಿಕಾ ಮೆಹ್ತಾ ಬಳಿ ಬಾಲಿವುಡ್ ನಟ-ನಟಿಯರು, ಕಾರ್ಪೊರೇಟ್ ಉದ್ಯಮದ ಪ್ರಮುಖರು ಸೇರಿದಂತೆ ಅನೇಕ ಖ್ಯಾತನಾಮರಿಗೆ ವಿಶ್ವದಾದ್ಯಂತ ಅನೇಕರಿಗೆ ಯೋಗಾಸನಗಳನ್ನು ಕಲಿಸುತ್ತಿದ್ದಾರೆ. ಆಧುನಿಕ ಜಗತ್ತು ತೀವ್ರ ಚಟುವಟಿಕೆಯುಳ್ಳ ಅವಿಶ್ರಾಂತ ತಾಣ. ಈ ಯುಗದಲ್ಲಿ ಜನರು ನಿರಂತರವಾಗಿ ಎಡಬಿಡದೇ ಕಾರ್ಯನಿರ್ವಹಿಸಬೇಕಾಗುತ್ತದೆ. ತಾಳ್ಮೆ, ಸಹನೆ-ಸಂಯಮ, ವ್ಯವಧಾನಕ್ಕೆ ಇಲ್ಲಿ ಜಾಗವಿಲ್ಲ. ನಮ್ಮ ಪ್ರತಿದಿನದ ವರ್ತನೆಯು ನಮ್ಮ ಪೂರ್ವಿಕರ ಕಾಲಕ್ಕಿಂತ ಸಾಕಷ್ಟು ಪರಿವರ್ತನೆಯಾಗಿ ಬೇರೆ ದಾರಿಯಲ್ಲಿ ಸಾಗಿದೆ. ಇದರ ಪರಿಣಾಮವಾಗಿ ಹೊಸ ರೋಗರುಜಿನಗಳು, ಹೊಸ ಸಮಸ್ಯೆ, ತೊಂದರೆಗಳ ಸರಮಾಲೆ ಹಾಗೂ ಕೆಲವು ದಶಕಗಳ ಹಿಂದೆ ನಾವು ಕಂಡು ಕೇಳರಿಯದಿದ್ದ ಕಾಯಿಲೆಗಳು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಸ್ವಾಸ್ಥ್ಯಕ್ಕೆ ನಿರಂತರ ಕೆಡುಕಾಗಿ ಪರಿಣಮಿಸಿದೆ. ಬದಲಾಗುತ್ತಿರುವ ವಿಶ್ವ ಖಂಡಿತವಾಗಿಯೂ ನಿಲ್ಲುವುದಿಲ್ಲ.. ಆದರೂ, ನಾವು ಇದಕ್ಕೆ ಒಗ್ಗಿಕೊಂಡು ಜೀವನ ನಡೆಸಬೇಕೇ?

Hot--06

ಪ್ರಕೃತಿ ವಿಸ್ಮಯವಾದುದು. ಪ್ರತಿಯೊಂದು ವೈಪರೀತ್ಯಕ್ಕೂ ನಿಸರ್ಗದಲ್ಲಿ ಪರಿಹಾರವಿದೆ, ಅದಕ್ಕೊಂದು ಉಪಶಮನವಿದೆ. ನಮ್ಮ ಇಂದಿನ ದು:ಖ, ನೋವು, ಸಂಕಟ, ಸಮಸ್ಯೆಗಳಿಗೆ ಯೋಗ ಎಂಬ ಪ್ರಾಚೀನ ವಿಜ್ಞಾನದ ಮೂಲಕ ಚಿಕಿತ್ಸೆ ಕಂಡುಕೊಳ್ಳಬಹುದು. ದೇಹ, ಮನಸ್ಸು ಮತ್ತು ಆತ್ಮ ಇವುಗಳ ನಡುವೆ ಸಮನ್ವಯತೆ ಮತ್ತು ಸಮಾನತೆ ಸಾಧಿಸುವ ಸಮಗ್ರ ಸಿದ್ದಾಂತದ ಚಿಕಿತ್ಸಾ ವಿಧಾನವಾಗಿದೆ. ಯೋಗ ಪ್ರಾಚೀನ ರೂಪದ ಒಂದು ವ್ಯಾಯಾಮವಾಗಿದ್ದು, ಸಾವಿರಾರು ವರ್ಷಗಳಿಂದ ತೀರಾ ನೈಸರ್ಗಿಕ ಹಾಗೂ ನಂಬಿಕೆ ಮಾರ್ಗದಲ್ಲಿ ಮನುಕುಲಕ್ಕೆ ಆರೋಗ್ಯದಿಂದ ಬದುಕುವ ಕೊಡುಗೆ ನೀಡಿದೆ. ಯೋಗ ಒಂದು ರೀತಿ ಪ್ರಶಾಂತ ಮನಸ್ಸು ಮತ್ತು ಆರೋಗ್ಯಕರ ದೇಹಕ್ಕೆ ಆಧ್ಯಾತ್ಮಿಕ ಮಾರ್ಗವಾಗಿದೆ. ಇದೇ ಕಾರಣಕ್ಕಾಗಿ ಯೋಗಾಸನವು ಅಂತರರಾಷ್ಟ್ರೀಯ ಮಟ್ಟದಲ್ಲಿ ಬಹುಳಷ್ಟು ಪ್ರಾಮುಖ್ಯತೆ ಪಡೆದುಕೊಂಡಿದೆ.

Hot--04

ಕಾರ್ಪೆಟ್ ಯೋಗ: ಯೋಗ ಯಾರೊಬ್ಬರಿಗೂ ಸೀಮಿತವಲ್ಲ ಅಥವಾ ಇದು ಪ್ರತಿದಿನದ ಕ್ರಮಬದ್ದತೆ, ಪಥ್ಯ, ಅನುಪಾನ, ಜೀವನ ಶೈಲಿಯಲ್ಲಿನ ಬದಲಾವಣೆ ಅಥವಾ ಸಾಹಸ, ಚುರುಕು ಪರಿಶ್ರಮ ಸ್ಥಿತಿಯ ದೀರ್ಘಾವಧಿ ಪ್ರಕ್ರಿಯೆಗಳ ಬೇಡಿಕೆಯಲ್ಲ. ಈ ಪ್ರಾಚೀನ ಕಲೆಯು ನಿಮಗೆ ಇಚ್ಚಾಶಕ್ತಿ ಇದ್ದರೆ ಸುಲಭವಾಗಿ ಅಭ್ಯಾಸ ಮಾಡಲು ಮತ್ತು ನೀವು ಯಶಸ್ವಿಯಾಗುವ ನಿಟ್ಟಿನಲ್ಲಿ ಬೆಳಕು ಚೆಲ್ಲುತ್ತದೆ. ಭಾರತೀಯ ಮೂಲದ ಯೋಗ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಪೊರೇಟ್ ಯೋಗದ ಸ್ವರೂಪ ಪಡೆದುಕೊಂಡಿದ್ದು ಪ್ರಾಚೀನ ವಿದ್ಯೆಗೆ ಆಧುನಿಕ ಸ್ಪರ್ಶ ನೀಡಲಾಗಿದೆ. ನೀವು ಕೆಲಸ ಮಾಡುವ ಸ್ಥಳದಲ್ಲಿನ ಒತ್ತಡ ಮತ್ತು ಖಿನ್ನತೆಯನ್ನು ಜಾಗ್ರತೆ, ಸಾಮಥ್ರ್ಯ ಮತ್ತು ಅಧಿಕ ಉತ್ಪಾದಕತೆಯನ್ನಾಗಿ ಪರಿವರ್ತಿಸುವುದು ಇದರ ಉದ್ದೇಶವಾಗಿದೆ.

Hot--03

ಕಾರ್ಪೊರೇಟ್ ಯೋಗದಲ್ಲಿ ನೀವು ವ್ಯಯಿಸುವ ಪ್ರತಿ ಸಮಯವು ಉದ್ಯೋಗ ನೀಡುವವರಿಗೆ ಮೂರರಷ್ಟು ಲಾಭ ನೀಡುತ್ತದೆ ಎಂಬುದು ವಾಸ್ತವ ಸಂಗತಿ. ಇದು ಉದ್ಯೋಗಿಗಳ ಸಂತೋಷ ಮತ್ತು ಸೌಖ್ಯದ ಒಂದು ಭಾಗವಾಗಿದ್ದು, ಕಾರ್ಪೊರೇಟ್ನಲ್ಲಿ ಯೋಗ ಜೀವನಶೈಲಿಯನ್ನು ಅಳವಡಿಸಿಕೊಳ್ಳಲು ಇದೊಂದೇ ಪೂರಕವಾಗಿದೆ. ಏಕ ಬಿಂದು ಮನಸ್ಸಿನ ಕಲೆಯಲ್ಲಿ ನಿಮ್ಮನ್ನು ತರಬೇತುಗೊಳಿಸುವ ಮೂಲಕ ಯೋಗವು ತಕ್ಷಣ ನಿಮ್ಮ ಮಾನಸಿಕ ಏಕಾಗ್ರತೆ ಮತ್ತು ಗಮನವನ್ನು ಸುಧಾರಿಸುತ್ತದೆ. ಯೋಗವು ಮೆದುಳಿನ ಎಡ ಮತ್ತು ಬಲ ಭಾಗಗಳನ್ನು ಸಮನ್ವಯಗೊಳಿಸುತ್ತದೆ. ಇದರಿಂದ ನ್ಯಾಯಸಮ್ಮತ ಮತ್ತು ಸೃಜನಾತ್ಮಕ ಆಲೋಚನೆ ಒಟ್ಟಿಗೆ ಬರುತ್ತದೆ.

yo-3

ಸ್ಫೂರ್ತಿಯ ಪ್ರೇರಣೆ ಸಾಮಾನ್ಯವಾಗಿ ಹೆಚ್ಚಾಗುತ್ತದೆ. ಯೋಗವು ನಿಮ್ಮ ನರಗಳು, ಎಂಡೋಕ್ರೈನ್ ಮತ್ತು ಕಾರ್ಡಿಯೋವ್ಯಾಸ್ಕುಲರ್ ವ್ಯವಸ್ಥೆ ಒಳಗಿರುವ ಸುಪ್ತ ಶಕ್ತಿಯನ್ನು ಜಾಗೃತಗೊಳಿಸುತ್ತದೆ. ಇದರಿಂದ ಮಂಪರು ಮತ್ತು ಕ್ಷೋಭೆಗಳು ಜಾಗೃತಿ ಮತ್ತು ಚೈತನ್ಯವಾಗಿ ಪರಿವರ್ತನೆಗೊಳ್ಳುತ್ತವೆ. ಯೋಗವು ಮೆದುಳಿಗೆ ಆಮ್ಲಜನಕ ಪೂರೈಕೆ ಮತ್ತು ರಕ್ತದಲ್ಲಿ ಎಂಡೋರ್‍ಫೈನ್ ಹೆಚ್ಚಳದ ಮೂಲಕ ಜಡತ್ವ, ಮನೋವಿಕಾರತೆ ಮತ್ತು ಖಿನ್ನತೆಯನ್ನು ಮಾನಸಿಕವಾಗಿ ಪರಿವರ್ತಿಸುತ್ತದೆ. ಯೋಗವು ಹಲವಾರು ಶಾಖೆಗಳನ್ನು ಒಳಗೊಂಡಿದೆ. ಯೋಗ ಒಂದು ದೈಹಿಕ ವ್ಯಾಯಾಮವಾಗಿದ್ದು, ಮನಸ್ಸು-ದೇಹ- ಉಸಿರಾಟ ಸಂಪರ್ಕದ ಏಕಾಗ್ರತೆಯ ಭಾಗವಾಗಿರುತ್ತದೆ. ಪ್ರಾಣ ಜೀವನ ಶಕ್ತಿಯೊಂದಿಗೆ ಪುನ:ಶ್ಚೇತನಗೊಳಿಸಿ ಇಡೀ ದೇಹವನ್ನು ವಿಷಮುಕ್ತಗೊಳಿಸುತ್ತದೆ. ಎಲ್ಲ ನರಗಳು ಮತ್ತು ದೇಹದ ವಿವಿಧ ವ್ಯವಸ್ಥೆಗಳನ್ನು ಉಪಶಮನಗೊಳಿಸಿತ್ತದೆ. ಧ್ಯಾನವು ಮನಸ್ಸನ್ನು ಪ್ರಶಾಂತಗೊಳಿಸುತ್ತದೆ. ಆತ್ಮ ವಿಶ್ವಾಸ ವೃದ್ಧಿಸುತ್ತದೆ ಹಾಗೂ ಏಕಾಗ್ರತೆ ಮತ್ತು ಗಮನವನ್ನು ಸುಧಾರಿಸುತ್ತದೆ.

ಭಾರತೀಯ ಮೂಲದ ಯೋಗ ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಕಾರ್ಪೊರೇಟ್ ಯೋಗದ ಸ್ವರೂಪ ಪಡೆದುಕೊಂಡಿದ್ದು ಪ್ರಾಚೀನ ವಿದ್ಯೆಗೆ ಆಧುನಿಕ ಸ್ಪರ್ಶ ನೀಡಲಾಗಿದೆ. ಎಲ್ಲ ನರಗಳು ಮತ್ತು ದೇಹದ ವಿವಿಧ ವ್ಯವಸ್ಥೆಗಳನ್ನು ಉಪಶಮನಗೊಳಿಸಿತ್ತದೆ. ಧ್ಯಾನವು ಮನಸ್ಸನ್ನು ಪ್ರಶಾಂತಗೊಳಿಸುತ್ತದೆ. ಆತ್ಮ ವಿಶ್ವಾಸ ವೃದ್ಧಿಸುತ್ತದೆ ಹಾಗೂ ಏಕಾಗ್ರತೆ ಮತ್ತು ಗಮನವನ್ನು ಸುಧಾರಿಸುತ್ತದೆ.

Facebook Comments

Sri Raghav

Admin