ಬಾಲಿವುಡ್ ಬಾದ್‍ಷಾ ಶಾರೂಖ್‍ಗೆ ಗೌರವ ಡಾಕ್ಟರೇಟ್ ಪ್ರದಾನ

ಈ ಸುದ್ದಿಯನ್ನು ಶೇರ್ ಮಾಡಿ

Sharukha-Khan

ಹೈದರಾಬಾದ್,ಡಿ.26- ಬಾಲಿವುಡ್ ಬಾದ್‍ಷಾ ಶಾರೂಖ್ ಖಾನ್ ಅವರಿಗೆ ಇಂದು ಮೌಲಾನ ಅಜಾದ್ ಕೇಂದ್ರೀಯ ಉರ್ದು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು. ವಿಶ್ವವಿದ್ಯಾನಿಲಯದ ಘಟಿಕೋತ್ಸವ ಸಮಾರಂಭದಲ್ಲಿ ಡಾಕ್ಟರೇಟ್ ಪದವಿ ಸ್ವೀಕರಿಸಿ ಮಾತನಾಡಿದ ಅವರು, ಈ ಪ್ರಶಸ್ತಿಗೆ ತಾವು ಅರ್ಹರೋ ಇಲ್ಲವೋ ಗೊತ್ತಿಲ್ಲ ಆದರೆ ವಿಶ್ವವಿದ್ಯಾಲಯ ನೀಡಿರುವ ಈ ಗೌರವ ಅತ್ಯಂತ ಸಂತಸ ನೀಡಿದೆ ಎಂದರು.  ನಮ್ಮ ತಂದೆ ಉರ್ದು ಕವಿಯಾಗಿದ್ದರು. ನನಗೆ ಉರ್ದು ವಿಶ್ವವಿದ್ಯಾನಿಲಯದಿಂದ ಗೌರವ ಡಾಕ್ಟರೇಟ್ ಲಭಿಸಿರುವುದನ್ನು ನೋಡಿದ್ದರೆ ತುಂಬ ಸಂತೋಷಪಡುತ್ತಿದ್ದರು ಎಂದು ಡಾ.ಎಸ್‍ಆರ್‍ಕೆ ಹೇಳಿದರು.

Eesanje News 24/7 ನ್ಯೂಸ್ ಆ್ಯಪ್ –  Click Here to Download 

Facebook Comments

Sri Raghav

Admin