ಬಾಲಿವುಡ್ ಹಿರಿಯ ನಟ ಶಶಿಕಪೂರ್ ಇನ್ನಿಲ್ಲ

ಈ ಸುದ್ದಿಯನ್ನು ಶೇರ್ ಮಾಡಿ

Rishi-Kapoor--01

ಮುಂಬೈ, ಡಿ.4: ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಬಾಲಿವುಡ್ ಹಿರಿಯ ನಟ ಶಶಿಕಪೂರ್ (79)ಇಂದು ನಿಧನರಾಗಿದ್ದಾರೆ. 2011ರಲ್ಲಿ ಪದ್ಯಭೂಷಣ ಪ್ರಶಸ್ತಿಗೆ ಭಾಜನರಾಗಿದ್ದ ಶಶಿಕಪೂರ್ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಇಂದು ಕೊನೆಯುಸಿರೆಳೆದರು. ಅವರಿಗೆ 79 ವರ್ಷ ವಯಸ್ಸಾಗಿತ್ತು.  ಬಾಲನಟನಾಗಿ ಬಾಲಿವುಡ್ ಪ್ರವೇಶ ಮಾಡಿದ್ದ ಅವರು. ಧರ್ಮಪುತ್ರ ಸಿನಿಮಾದ ಮೂಲಕ ನಾಯಕ ನಟನಾಗಿ ಬೆಳ್ಳಿ ತೆರೆಗೆ ಬಡ್ತಿ ಪಡೆದಿದ್ದರು. ಕೋಲ್ಕತ್ತಾದಲ್ಲಿ ಜನಿಸಿದ್ದ ಶಶಿ ಕಪೂರ್ 70-80 ದಶಕದಲ್ಲಿ ಬಾಲಿವುಡ್’ನ ಸಾಮ್ರಾಟನಾಗಿ ಮೆರೆದಿದ್ದರು. ಸರಿ ಸುಮಾರು 148 ಸಿನಿಮಾಗಳಲ್ಲಿ ಅಭಿನಯಸಿರುವ ಅವರು 1999ರ ನಂತರ ತಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನಲೆಯಲ್ಲಿ ಸಿನಿಮಾ ರಂಗದಿಂದ ದೂರ ಉಳಿದಿದ್ದರು.   ಇವರ ತಂದೆ ಪೃಥ್ವಿರಾಜ್ ಕಪೂರ್ ಆಗಿದ್ದು, ರಾಜ್ ಕಪೂರ್ ಹಾಗೂ ಶಮ್ಮಿ ಕಪೂರ್ ಇವರ ಕಿರಿಯ ಸಹೋದರರಾಗಿದ್ದರಾರೆ. ಇವರ ಪತ್ನಿ ಜೆನ್ನಿಫರ್ ಕೆಂಡಲ್ ತೀರಿಹೋಗಿದ್ದು, ಕರಣ್ ಕಪೂರ್, ಕುನಾಲ್ ಕಪೂರ್ ಹಾಗೂ ಸಂಜನಾ ಕಪೂರ್ ಎಂಬ ಮಕ್ಕಳಿದ್ದಾರೆ.

Facebook Comments

Sri Raghav

Admin