ಬಾಲ ಬಿಚ್ಚಿದರೆ ಮತ್ತೆ ಮತ್ತೆ ‘ಸರ್ಜಿಕಲ್ ಸ್ಟ್ರೈಕ್’ : ಪಾಕ್‍ಗೆ ಪರಿಕ್ಕರ್ ವಾರ್ನಿಂಗ್

ಈ ಸುದ್ದಿಯನ್ನು ಶೇರ್ ಮಾಡಿ

Manohar

ಡೆಹ್ರಾಡೂನ್, ಅ.2- ಭಾರತದ ಭದ್ರತೆಗೆ ಸವಾಲು ಎದುರಾದಲ್ಲಿ ಭಾರತವು ಗಡಿಯಾಚೆಗೆ ಇನ್ನಷ್ಟು ನಿರ್ದಿಷ್ಟ ದಾಳಿಗಳನ್ನು ನಡೆಸಲಿದೆ ಎಂದು ಕೇಂದ್ರ ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ಎಚ್ಚರಿಕೆ ನೀಡಿದ್ದಾರೆ.  ಗಿರಿಧಾಮ ನಗರಿ ಡೆಡ್ರಾಡೂನ್‍ನಲ್ಲಿ ನಿನ್ನೆ ರಾತ್ರಿ ವೀರಾಗ್ರಣಿ ವೀರ್ ಚಂದ್ರ ಸಿಂಗ್ ಘರ್‍ವಾಲ್ ಅವರ ಪ್ರತಿಮೆಯನ್ನು ಅನಾವರಣಗೊಳಿಸಿ ಮಾತನಾಡಿದ ಅವರು ಪಾಕಿಸ್ತಾನದ ವಿರುದ್ಧ ವಾಗ್ದಾಳಿ ನಡೆಸಿದರು.  ದೇಶದ ಭದ್ರತೆಗೆ ದಕ್ಕೆ ಉಂಟಾದರೆ ಗುರುವಾರ ಭಯೋತ್ಪಾದಕರ ಶಿಬಿರಗಳ ಮೇಲೆ ನಡೆದ ದಾಳಿಗಳಂಥ ಸೇನಾ ಕಾರ್ಯಾಚರಣೆಯನ್ನು ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದರು.

ದೇಶದ ಮೇಲೆ ಯಾರೇ ವಕ್ರ ದೃಷ್ಟಿ ಬೀರಿದರೂ ಅವರನ್ನು ಸುಮ್ಮನೆ ಬಿಡವುದಿಲ್ಲ ಎಂದು ಅವರು ಪಾಕಿಸ್ತಾನಕ್ಕೆ ಮತ್ತೊಮ್ಮೆ ತಿರುಗೇಟು ನೀಡಿದ್ದರು. ಇದಕ್ಕೂ ಮುನ್ನ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಭಾರತವು ನಡೆಸಿದ ಆಪರೇಷನ್ ನಂತರ ಪಾಕಿಸ್ತಾನ ಕೋಮಾ ಸ್ಥಿತಿಯಲ್ಲೇ ಮುಂದುವರೆದಿದೆ ಎಂದು ಲೇವಡಿ ಮಾಡಿದರು.

► Follow us on –  Facebook / Twitter  / Google+

Facebook Comments

Sri Raghav

Admin