ಬಾಳೆ, ಪರಂಗಿ ತಿಂದು ಹಾಕಿದ ಆನೆ ಹಿಂಡು

ಈ ಸುದ್ದಿಯನ್ನು ಶೇರ್ ಮಾಡಿ

ಚಾಮರಾಜನಗರ,ಫೆ.7– ಕಾಡಾನೆ ಹಿಂಡು ರೈತರ ಜಮೀನಿನ ಮೇಲೆ ದಾಳಿ ಮಾಡಿ ಲಕ್ಷಾಂತರ ಬೆಲೆ ಬಾಳುವ ಬೆಳೆಯನ್ನು ತಿಂದು ಹಾಕಿ ತೆಂಗು ಮತ್ತಿತರೆ ಮರಗಳನ್ನು ಕೆಡವಿ ಧ್ವಂಸಗೊಳಿಸಿರುವ ಘಟನೆ ತಾಲ್ಲೂಕಿನ ಅಯ್ಯಪ್ಪನಪುರ ಗ್ರಾಮದಲ್ಲಿ ನಡೆದಿದೆ.ಸರ್ದಾರ್ ಎಂಬುವವರ ತೋಟದಲ್ಲಿ ಕಾಣಿಸಿಕೊಂಡಿದ್ದ ಕಾಲ್ಕಕ್ಕೂ ಹೆಚ್ಚು ಕಾಡಾನೆಗಳು ಸುಮಾರು 6 ಎಕರೆ ಪ್ರದೇಶದಲ್ಲಿ ಬೆಳೆಯಲಾಗಿದ್ದ ಬಾಳೆ, ಪರಂಗಿ, ಸಪೋಟ  ಸೇರಿದಂತೆ ಇತರೆ ಹಣ್ಣು, ತರಕಾರಿಯನ್ನು ತಿಂದು ಹಾಕಿವೆ.ಇದರಿಂದಾಗಿ ಅಕ್ಕ-ಪಕ್ಕದ ರೈತರೂ ತಮ್ಮ ಬೆಳೆಗಳಿಗೂ ಸಂಚುಕಾರ ಒದಗಿಬರುತ್ತದೆ ಎಂಬ ಆತಂಕಗೊಂಡಿದ್ದಾರೆ. ಬಿಳಿಗಿರಿರಂಗನಾಥ ಸ್ವಾಮಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಿಂದ ಈ ಆನೆಗಳ ಹಿಂಡು ಬಂದಿರಬಹುದೆಂದು ಹೇಳಲಾಗಿದೆ.
ಗುಡ್ಡಗಾಡು ಪ್ರದೇಶದ ಆಸುಪಾಸಿನಲ್ಲಿರುವ ಈ ಪ್ರದೇಶದಲ್ಲಿ ಕಾಡು ಪ್ರಾಣಿಗಳ ಹಾವಳಿ ಹೆಚ್ಚುತ್ತಿದೆ. ಅರಣ್ಯ ಇಲಾಖೆ ಸಿಬ್ಬಂದಿಗಳು ಸಾಕಷ್ಟು ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದ್ದರೂ ಫಲ ನೀಡುತ್ತಿಲ್ಲ.

 

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin