ಬಾವಿಗೆ ಬಿದ್ದಿದ್ದ ಅಪರೂಪದ ಕರಿಚಿರತೆಯ ರಕ್ಷಣೆ

ಈ ಸುದ್ದಿಯನ್ನು ಶೇರ್ ಮಾಡಿ

Black--01

ಕಾರ್ಕಳ, ಮೇ.9– ಕಪ್ಪು ಚಿರತೆಯೊಂದು ಬಾವಿಗೆ ಬಿದ್ದು ನರಳುತ್ತಿದ್ದ ಘಟನೆ ನೋಡಿ ಗ್ರಾಮಸ್ಥರು ಪರಿತಪಿಸಿ ಕೊನೆಗೂ ಅದರ ಜೀವ ಉಳಿಸುವಲ್ಲಿ ಯಶಸ್ವಿಯಾದ ಅಪರೂಪದ ಘಟನೆ ಇಲ್ಲಿನ ಬಳೆಹಿಟ್ಲು ಬಳಿಯ ಹಿರಂಗನ ಗ್ರಾಮದಲ್ಲಿ ನಡೆದಿದೆ. ಅಪರೂಪದ ಈ ವನ್ಯಪ್ರಾಣಿ ಇಂದು ಮುಂಜಾನೆ ಆಹಾರ ಅರೆಸಿ ಗ್ರಾಮಕ್ಕೆ ಬಂದು ಕತ್ತಲ್ಲಿ ತೆರೆದ ಬಾವಿಗೆ ಬಿದ್ದಿದೆ. ನಂತರ ಮೇಲೆ ಬರಲು ಪ್ರಯಾಸ ಪಟ್ಟು ಪದೆ ಪದೆ ನೀರಿನಲ್ಲಿ ಮುಳುಗುತ್ತಿತ್ತು. ಚಿರತೆಯ ಘರ್ಜನೆ ಶಬ್ದ ಕೇಳಿ ಸ್ಥಳೀಯರು ಎಚ್ಚರಿಕೆಯಿಂದ ಹುಡುಕಾಟ ನಡೆಸಿದಾಗ ರಾಜಾರಾಂ ಕದಂಬ ಎಂಬುವರ ತೋಟದ ಬಾವಿಯಲ್ಲಿ ಬಿದ್ದಿರುವುದು ಗೊತ್ತಾಗಿದೆ.ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಯಿತು. ನಂತರ ಅದನ್ನು ಮೇಲೆತ್ತಲು ಕಾರ್ಯಚರಣೆ ಪ್ರಾರಂಭವಾಯಿತು. ಅರವಳಿಕೆ ನೀಡಿದರೆ ಚಿರತೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಬಹುದು ಎಂಬ ಮುನ್ನೆಚ್ಚರಿಕೆಯಿಂದ ತೆಂಗಿನ ಕಾಯಿ ಗರಿಗಳ ಏಣಿ ಮಾಡಿ ಬಾವಿಯೊಳಗೆ ಬಿಡಲಾಯಿತ್ತು.   ಮೇಲೆ ಬಲೆ ಹಾಗೂ ಬೋನನ್ನು ಕೂಡ ಇಡಲಾಗಿತ್ತು. ಯೋಚಿಸಿದಂತೆಯೇ ಆಸರೆ ಸಿಕ್ಕ ತಕ್ಷಣ ಚಕಚಕನೆ ಮೇಲೆರಿ ಬಂದ ಚಿರತೆ ನೇರವಾಗಿ ಬೋನಿನೊಳಗೆ ಬಿದ್ದಿದೆ.ಒಟ್ಟಿನಲ್ಲಿ ಚಿರತೆ ಜೀವ ಉಳಿಸಿಕೊಂಡಿದೆ. ಆದರೆ ಸೆರೆಯಾಗಿದೆ. ಸಧ್ಯದಲ್ಲಿಯೇ ಇದನ್ನು ಸಂರಕ್ಷಿತ ಅರಣ್ಯ ಪ್ರದೇಶಕ್ಕೆ ಬಿಡಲಾಗುವುದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

 

Facebook Comments

Sri Raghav

Admin