ಬಾವಿಯಲ್ಲಿ ಇದ್ದಕ್ಕಿದ್ದಂತೆ ಬಿಸಿನೀರು ಉತ್ಪತ್ತಿ, ಅಚ್ಚರಿ ಜೊತೆ ಆತಂಕಕ್ಕೊಳಗಾದ ಮಂಡ್ಯ ಮಂದಿ

ಈ ಸುದ್ದಿಯನ್ನು ಶೇರ್ ಮಾಡಿ

Hot-Water

ಮಂಡ್ಯ, ಸೆ.27- ತಣ್ಣೀರು ಸಿಗುತ್ತಿದ್ದ ಬಾವಿಯಲ್ಲಿ ಇದ್ದಕ್ಕಿದ್ದಂತೆ ಬಿಸಿ ನೀರು ಉತ್ಪತ್ತಿಯಾಗುವುದರೊಂದಿಗೆ ಜನರಲ್ಲಿ ತೀವ್ರ ಅಚ್ಚರಿ ಮೂಡಿಸಿರುವ ಪ್ರಸಂಗ ನಗರದ ಗುತ್ತಲ ರಸ್ತೆಯಲ್ಲಿರುವ ಬಾವಿಯೊಂದರಲ್ಲಿ ನಡೆದಿದೆ. ವೆಂಕಟೇಶ್ ಎಂಬುವರಿಗೆ ಸೇರಿದ ಬಾವಿಯಲ್ಲಿ ಅವರ ಕುಟುಂಬ ಪ್ರತಿನಿತ್ಯ ನೀರು ತೆಗೆದುಕೊಂಡು ದಿನನಿತ್ಯದ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿದ್ದರು. ಎಂದಿನಂತೆ ಇಂದೂ ಕೂಡ ನೀರು ತೆಗೆದುಕೊಂಡಾಗ ನೀರು ಬಿಸಿನೀರಾಗಿತ್ತು ಜತೆಗೆ ಬಾವಿಯಿಂದ ಹೊಗೆ ಬರಲಾರಂಭಿಸಿತು. ಇದರಿಂದ ತೀವ್ರ ಅಚ್ಚರಿಗೆ ಒಳಗಾದ ಇವರು ನಗರದ ಭೂ ವಿಜ್ಞಾನಿಗಳಿಗೆ ವಿಷಯ ತಿಳಿಸಿದ್ದಾರೆ.  ಸ್ಥಳಕ್ಕೆ ದಾವಿಸಿದ ಭೂ ವಿಜ್ಞಾನಿಗಳು ಬಾವಿಯನ್ನು ಪರಿಶೀಲಿಸಿ ಬಾವಿಯಲ್ಲಿ ಬಿಸಿನೀರು ಇರಲು ಮತ್ತು ಹೊಗೆ ಬರಲು ಕಾರಣವೇನು ಎಂಬ ಬಗ್ಗೆ ಸೂಕ್ತ ಶೋಧ ನಡೆಸುತ್ತದ್ದಾರೆ. ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಬಾವಿ ಬಳಿ ಬಂದು ಈ ಅಚ್ಚರಿಯ ಸಂಗತಿಯನ್ನು ನೋಡುತ್ತಿದ್ದರು.

► Follow us on –  Facebook / Twitter  / Google+

Facebook Comments

Sri Raghav

Admin