‘ಬಾಹುಬಲಿ’ ನಿರ್ಮಾಪಕರ ಮನೆಯಲ್ಲಿ ಪತ್ತೆಯಾಯ್ತು 50 ಕೋಟಿ ರೂ. ನಗದು…!

ಈ ಸುದ್ದಿಯನ್ನು ಶೇರ್ ಮಾಡಿ

Bahubali-002

ಹೈದರಾಬಾದ್ ನ.11 : ಖ್ಯಾತ ನಿರ್ದೇಶಕ ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಬಾಹುಬಲಿ’ ಚಿತ್ರದ ನಿರ್ಮಾಪಕರ ಮನೆಯಲ್ಲಿ ಬರೋಬ್ಬರಿ 50 ಕೋಟಿ ರೂ. ನಗದು ಪತ್ತೆಯಾಗಿದೆ.  ಹೈದರಾಬಾದ್ ಬಂಜಾರ ಹಿಲ್ಸ್ ನಲ್ಲಿರುವ ‘ಬಾಹುಬಲಿ’ ಮತ್ತು ‘ಬಾಹುಬಲಿ-2’ ಚಿತ್ರದ ನಿರ್ಮಾಪಕರಾದ ಶೋಭು ಯರ್ಲಗಡ್ಡ ಮತ್ತು ಪ್ರಸಾದ್ ದೇವಿನೇನಿ ಅವರ ನಿವಾಸ ಮತ್ತು ಕಚೇರಿ ಮೇಲೆ ಐಟಿ ಇಲಾಖೆ ಅಧಿಕಾರಿಗಳು ದಾಳಿ ಮಾಡಿದ್ದಾರೆ. ದಾಳಿಯ ಸಂದರ್ಭದಲ್ಲಿ ಪ್ರಸಾದ್ ದೇವಿನೇನಿ ನಿವಾಸದಲ್ಲಿ ಬರೋಬ್ಬರಿ 50 ಕೋಟಿ ರೂ. ನಗದು ಪತ್ತೆಯಾಗಿದೆ.

ಶೋಭು ಯರ್ಲಗಡ್ಡ ಅವರ ನಿವಾಸದಲ್ಲಿಯೂ ಪರಿಶೀಲನೆ ನಡೆಸಲಾಗಿದೆ. ‘ಬಾಹುಬಲಿ’ 125 ಕೋಟಿ ರೂ. ವೆಚ್ಛದಲ್ಲಿ ನಿರ್ಮಾಣವಾಗಿ 610 ಕೋಟಿ ರೂ. ಗಳಿಸಿತ್ತು. ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ರಮ್ಯಕೃಷ್ಣ ಮೊದಲಾದವರು ಅಭಿನಯಿಸಿರುವ ‘ಬಾಹುಬಲಿ-2’ ಮುಂದಿನ ವರ್ಷ ತೆರೆ ಕಾಣಲಿದೆ.

► Follow us on –  Facebook / Twitter  / Google+

Facebook Comments

Sri Raghav

Admin