ಬಾಹುಬಲಿ-2 ಬಗ್ಗೆ ತಮನ್ನಾ ಹೇಳಿದ್ದೇನು ಗೊತ್ತೇ..?

ಈ ಸುದ್ದಿಯನ್ನು ಶೇರ್ ಮಾಡಿ

Tamanna

ಹಾಲಿವುಡ್ ಚಿತ್ರಕ್ಕೆ ಸರಿಸಾಟಿಯಾಗಿ ವಿಶ್ವ ಮನ್ನಣೆ ಗಳಿಸಿದ್ದ ‘ಬಾಹುಬಲಿ’ ಸಿನಿಮಾದ ಎರಡನೆ ಭಾಗ ಭಾವೋದ್ವೇಗಗೊಳಿಸಿದೆ ಎನ್ನುತ್ತಾರೆ ಮೋಹಕ ಚೆಲುವೆ ತಮನ್ನಾ ಬಾಟಿಯಾ.
ಬ್ಲಾಕ್ ಬಸ್ಟರ್ ಐತಿಹಾಸಿಕ ಸಾಹಸಮಯ ‘ಬಾಹುಬಲಿ’ ಮೊದಲ ಭಾಗದಲ್ಲಿ ಅವಂತಿಕಾ ಪಾತ್ರದಲ್ಲಿ ಮಿಂಚಿದ್ದ ಈ ನಟಿ ‘ಬಾಹುಬಲಿ-2’ ಚಿತ್ರದ ಬಗ್ಗೆ ನಡುಕಕ್ಕಿಂತ ಭಾವೋದ್ವೇಗವೇ ಹೆಚ್ಚಾಗಿದೆ ಎಂದಿದ್ದಾಳೆ. ಈ ಚಿತ್ರದ ಬಗ್ಗೆ ಒಂದೆಡೆ ಸಿನಿಮಾ ಪ್ರೇಮಿಗಳು ಕಾತುರರಾಗಿದ್ದರೆ, ಇನ್ನೊಂದೆಡೆ ಚಿತ್ರತಂಡ ಮುಂದಿನ ಫಲಿತಾಂಶದ ಬಗ್ಗೆ ಭಾವೋದ್ವೇಗಕ್ಕೆ ಒಳಗಾಗಿದೆ ಎಂದು ಮುಂಬೈನಲ್ಲಿ ಮಾಧ್ಯಮ ಮಂದಿಯೊಂದಿಗೆ ಮಾತನಾಡುತ್ತ  ಪ್ರತಿಕ್ರಿಯಿಸಿದ್ದಾಳೆ.

ತೆಲುಗು ನಿರ್ದೇಶಕ ಎಸ್.ಎಸ್.ರಾಜಮೌಳಿ ನಿರ್ದೇಶನದ ಬಹುಭಾಷಾ ‘ಬಾಹುಬಲಿ: ದಿ ಬಿಗಿನಿಂಗ್’ ಸಿನಿಮಾ ದೊಡ್ಡ ಮಟ್ಟದಲ್ಲಿ ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಿ, ಹಿಂದಿನ ಎಲ್ಲ ದಾಖಲೆಗಳನ್ನು ನುಚ್ಚುನೂರು ಮಾಡಿತು. ಅಲ್ಲದೆ, ಈ ವರ್ಷದ ರಾಷ್ಟ್ರೀಯ ಪ್ರಶಸ್ತಿಯನ್ನೂ ಗೆದ್ದುಕೊಂಡಿತ್ತು.  ಮೊದಲ ಭಾಗ ತೆರೆ ಕಾಣುವುದಕ್ಕೂ ಮುನ್ನ ಚಿತ್ರತಂಡದಲ್ಲಿ ಆತಂಕ ಮನೆ ಮಾಡಿತ್ತು. ಈ ಐತಿಹಾಸಿಕ ಸಿನಿಮಾವನ್ನು ಪ್ರೇಕ್ಷಕರು ಯಾವ ರೀತಿ ಸ್ವೀಕರಿಸುತ್ತಾರೆ.  ಈ ಸಿನಿಮಾ ಯಶಸ್ಸು ಸಾಧಿಸುತ್ತದೆಯೇ ಎಂಬ ಭಯವೂ ಕಾಡಿತು. ಮೊದಲ ಭಾಗದ ಯಶಸ್ಸಿನ ನಂತರ ಎರಡನೆ ಕಂತಿನ ಬಗ್ಗೆ ಸಿನಿಮಾ ಬಳಗ ರಿಲ್ಯಾಕ್ಸ್ ಆಗಿದೆ. ಆದರೂ ಭಯಕ್ಕಿಂತ ಭಾವೋದ್ವೇಗವೇ ಹೆಚ್ಚಾಗಿದೆ ಎಂದು ‘ರೂಪರಾಶಿ’ ತಮನ್ನಾ ಹೇಳಿದ್ದಾಳೆ.

► Follow us on –  Facebook / Twitter  / Google+

Facebook Comments

Sri Raghav

Admin