ಬಿಎಂಟಿಸಿ ಬಸ್‍’ಗಳಲ್ಲಿ ಕೈಚಳಕ ತೋರಿಸುತ್ತಿದ್ದ ಇಬ್ಬರು ಕಳ್ಳಿಯರ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

Ladies--01

ಬೆಂಗಳೂರು, ನ.28- ಬಿಎಂಟಿಸಿ ಬಸ್ ನಿಲ್ದಾಣ ಹಾಗೂ ಬಸ್‍ಗಳಲ್ಲಿ ಪ್ರಯಾಣಿಕರ ಸೋಗಿನಲ್ಲಿ ಜೇಬು ಹಾಗೂ ಮಹಿಳೆಯರ ಬ್ಯಾಗ್‍ಗಳಿಂದ ಚಿನ್ನಾಭರಣ ಹಾಗೂ ಹಣವನ್ನು ದೋಚುತ್ತಿದ್ದ ತಮಿಳುನಾಡು ಮೂಲದ ಇಬ್ಬರು ಚೋರಿಯರನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿ 3.60 ಲಕ್ಷ ರೂ. ಚಿನ್ನಾಭರಣ ಹಾಗೂ 75 ಸಾವಿರ ನಗದನ್ನು ವಶಪಡಿಸಿಕೊಂಡಿದ್ದಾರೆ.ಮೂಲತಃ ತಮಿಳುನಾಡಿನ ಚಂಗಂ ತಾಲೂಕಿನ ಅಮುಲು(30) ಮತ್ತು ವಲ್ಲಿ (35) ಬಂಧಿತ ಕಳ್ಳಿಯರು.

ಇವರಿಬ್ಬರು ಪ್ರಯಾಣಿಕರ ಸೋಗಿನಲ್ಲಿ ಬಸ್ ನಿಲ್ದಾಣ ಹಾಗೂ ಬಿಎಂಟಿಸಿ ಬಸ್‍ಗಳಲ್ಲಿ ಸಂಚರಿಸಿ ಪ್ರಯಾಣಿಕರ ಜೇಬು ಹಾಗೂ ಬ್ಯಾಗ್‍ನಿಂದ ಹಣ, ಚಿನ್ನಾಭರಣಗಳು ಮತ್ತು ಬೆಲೆ ಬಾಳುವ ವಸ್ತುಗಳನ್ನು ಕಳವು ಮಾಡುತ್ತಿದ್ದರು. ಉಪ್ಪಾರಪೇಟೆ ಠಾಣೆಯಲ್ಲಿ ಕಳವಿನ ಬಗ್ಗೆ ಆಗಾಗ್ಗೆ ಪ್ರಕರಣ ದಾಖಲಾಗುತ್ತಿತ್ತು. ತನಿಖೆ ಕೈಗೊಂಡ ಪೊಲೀಸರು ಈ ಇಬ್ಬರನ್ನು ಬಂಧಿಸಿ ಪ್ರಕರಣಕ್ಕೆ ಸಂಬಂಧಿಸಿದಂತೆ 20 ಸಾವಿರ ನಗದು, ಮತ್ತೊಂದು ಪ್ರಕರಣದಲ್ಲಿ 3.60 ಲಕ್ಷ ರೂ. ಬೆಲೆಯ 120 ಗ್ರಾಂ ಚಿನ್ನಾಭರಣಗಳು, ಇನ್ನೊಂದು ಪ್ರಕರಣದಲ್ಲಿ 55 ಸಾವಿರ ಹಣವನ್ನು ವಶಪಡಿಸಿಕೊಂಡಿದ್ದಾರೆ.

ಮತ್ತೊಬ್ಬನ ಸೆರೆ: ಪ್ರಯಾಣಿಕರ ಸೋಗಿನಲ್ಲಿ ಬಿಎಂಟಿಸಿ ಬಸ್‍ನಲ್ಲಿ ಪ್ರಯಾಣಿಸಿ ಪ್ರಯಾಣಿಕರ ಜೇಬು ಹಾಗೂ ಬ್ಯಾಗ್‍ಗಳಿಂದ ಹಣ, ಚಿನ್ನಾಭರಣ ದೋಚಿದ್ದ ಮೂಲತಃ ಶಿವಮೊಗ್ಗ ಜಿಲ್ಲೆಯ, ಭದ್ರಾವತಿ ತಾಲೂಕಿನ ಯೋಗೇಶ್(29) ಎಂಬಾತನನ್ನು ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಿ 6.90 ಲಕ್ಷ ರೂ. ಮೌಲ್ಯದ ಚಿನ್ನಾಭರಣವನ್ನು ವಶಪಡಿಸಿಕೊಂಡಿದ್ದಾರೆ.

ಉಪ್ಪಾರಪೇಟೆ ಠಾಣೆಯಲ್ಲಿ ದಾಖಲಾಗಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ 3.6 ಲಕ್ಷ ರೂ. ಬೆಲೆ ಬಾಳುವ 102 ಗ್ರಾಂ ಚಿನ್ನಾಭರಣ, ಕಲಾಸಿಪಾಳ್ಯ ಠಾಣೆಯಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ 2.64 ಲಕ್ಷ ರೂ. ಬೆಲೆ ಬಾಳುವ 88 ಗ್ರಾಂ ಚಿನ್ನಾಭರಣ, ಸಿಟಿ ಮಾರ್ಕೆಟ್ ಠಾಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ 90 ಸಾವಿರ ಬೆಲೆ ಬಾಳುವ ಚಿನ್ನದ ಆಭರಣ ಹಾಗೂ ಬೆಳ್ಳಿ ವಸ್ತುಗಳನ್ನು ವಶಪಡಿಕೊಂಡಿದ್ದಾರೆ.

Facebook Comments

Sri Raghav

Admin