ಬಿಎಂಟಿಸಿ ಬಸ್ ಬಸ್ ನಿಲ್ಲಿಸಿದ ಹಾಗೆ ವಿಮಾನವನ್ನು ನಿಲ್ಲಿಸಲು ಪ್ರಯತ್ನಿಸಿದ ಭೂಪ..!

ಈ ಸುದ್ದಿಯನ್ನು ಶೇರ್ ಮಾಡಿ


ಮ್ಯಾಡ್ರಿಡ್ ಆ.11 : ಇಲ್ಲೊಬ್ಬ ಮಹಾನುಭಾವ ವಿಮಾನವನ್ನು ಬಿಎಂಟಿಸಿ ಬಸ್ ನಿಲ್ಲಿಸಿದ ಹಾಗೆ  ‘ಸ್ಟಾಪ್ ಸ್ಟಾಪ್’ ಎಂದು ಕೂಗಿ ಟೆಕ್ ಆಫ್ ಆಗುತ್ತಿದ್ದ ವಿಮಾನವನ್ನು ನಿಲ್ಲಿಸಲು ಬೇಡಿಕೊಂಡ ವಿಲಕ್ಷಣ ಘಟನೆಗೆ ಮ್ಯಾಡ್ರಿಡ್ ವಿಮಾನ ನಿಲ್ದಾಣ ಸಾಕ್ಷಿಯಾಯಿತು.    ಸ್ಪೇನ್’ನಲ್ಲೊಬ್ಬ ಮಹಾನುಭಾವ ತಡವಾಗಿ ಬಂದು, ‘ನಿಲ್ಲಿಸಿ..ನಿಲ್ಲಿಸಿ..’ ಎಂದು ಟಾರ್ಮ್ಯಾಕ್ ನಲ್ಲಿ ಟೆಕ್ ಆಫ್ ಆದ ವಿಮಾನದ ಬೆನ್ನಟ್ಟಿ ಓಡಿದ. ತಡವಾಗಿ ಬಂದ ಪ್ರಯಾಣಿಕ ಭದ್ರತಾ ಪರಿಶೀಲನೆ ಎಲ್ಲ ಮುಗಿಸಿ ಬರುವ ವೇಳೆ ಗ್ರಾನ್ ಕೆನಾರಿಯಾಕ್ಕೆ ತೆರಳುವ ರ್ಯಾನ್ ಏರ್ ವಿಮಾನ ಹಾರಾಟ ಆರಂಭಿಸಿತ್ತು. ದಾರಿ ಕಾಣದಾದ ಆತ ಆವೇಶದಲ್ಲಿ ಜೆಟ್ ಬ್ರಿಡ್ಜ್ ನಿಂದ 10 ಅಡಿಗಳಷ್ಟು ಕೆಳಕ್ಕೆ ಹಾರಿದ್ದಾನೆ.ಬ್ಯಾಗ್’ಗಳನ್ನು ಹಿಡಿದು ಭದ್ರತಾ ನಿಯಮಾವಳಿಗಳನ್ನು ಉಲ್ಲಂಘಿಸಿ ಟಾರ್ಮ್ಯಾಕ್ ನಲ್ಲಿ ವಿಮಾನದ ಬೆನ್ನಟ್ಟಿ ಓಡಿದ್ದಾನೆ.

ಆದರೆ ಅವನ ಕೂಗು ಪೈಲೆಟ್ ಗೆ ಕೇಳಿಸಿತೋ ಇಲ್ಲವೋ ಗೊತ್ತಿಲ್ಲ, ವಿಮಾನ ಮಾತ್ರ ಹಾರಾಟ ಮುಂದುವರೆಸಿತ್ತು. ಇತ್ತ ವಿಮಾನ ಮಿಸ್ ಮಾಡಿಕೊಂಡ ಇವನು ತಲೆ ಮೆಲೆ ಕೈಹೊತ್ತು ಕುಳಿತ. ನಂತರ  ಆತನನ್ನು ಅಲ್ಲಿನ ಪೊಲೀಸರು ಬಂಧಿಸಿ ಕರೆದೊಯ್ದರು.

► Follow us on –  Facebook / Twitter  / Google+

Facebook Comments

Sri Raghav

Admin