ಬಿಎಂಪಿಯ 11ಸ್ಥಾಯಿ ಸಮಿತಿಗೆ ಅಧ್ಯಕ್ಷರ ಆಯ್ಕೆ : ಯಾರು ಯಾವ ಸಮಿತಿಗೆ ಇಲ್ಲಿದೆ ನೋಡಿ ಪಟ್ಟಿ

ಈ ಸುದ್ದಿಯನ್ನು ಶೇರ್ ಮಾಡಿ

BBMP
ಬೆಂಗಳೂರು, ಅ.26- ಸಿಬ್ಬಂದಿ ಮತ್ತು ಆಡಳಿತಾ ಸುಧಾರಣಾ ಸ್ಥಾಯಿ ಸಮಿತಿ ಹೊರತು ಪಡಿಸಿ ಬಿಬಿಎಂಪಿಯ 11 ಸ್ಥಾಯಿ ಸಮಿತಿಗೆ ಇಂದು ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.ಮೇಯರ್ ಪದ್ಮಾವತಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಸ್ಥಾಯಿ ಸಮಿತಿಗಳಿಗೆ ಅಧ್ಯಕ್ಷರನ್ನು ಆಯ್ಕೆ ಮಾಡಲಾಯಿತು.
1. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ -ಗುಣಶೇಖರ್
2.ಆರೋಗ್ಯ -ಆನಂದ್‍ಕುಮಾರ್

3.ನಗರ ಯೋಜನೆ -ಮಂಜುಳಾ ನಾರಾಯಣಸ್ವಾಮಿ
4. ಬೃಹತ್ ಕಾಮಗಾರಿ – ಟಿ.ಡಿ.ಚಂದ್ರಪ್ಪ
5. ವಾರ್ಡ್ ಮಟ್ಟದ ಕಾಮಗಾರಿ-ಭದ್ರೇಗೌಡ
6. ಶಿಕ್ಷಣ ಸ್ಥಾಯಿ ಸಮಿತಿ -ನಾಜೀಮಾಖಾನ್
7. ಸಾಮಾಜಿಕ ನ್ಯಾಯ-ಏಳುಮಲೈ
8. ತೋಟಗಾರಿಕೆ- ಮೀನಾಕ್ಷಿ
9. ಅಪೀಲು ಸ್ಥಾಯಿ ಸಮಿತಿ- ಸೀಮಾ ಅಲ್ತಾಕ್
10.ಲೆಕ್ಕ ಪತ್ರ ಸ್ಥಾಯಿ ಸಮಿತಿ-ನೇತ್ರಾನಾರಾಯಣ್
11. ಮಾರುಕಟ್ಟೆ ಸ್ಥಾಯಿ ಸಮಿತಿ-ಗಾಯತ್ರಿ ಅವರುಗಳನ್ನು ಆಯ್ಕೆ ಮಾಡಲಾಗಿದೆ.
ಅಪೀಲು ಸ್ಥಾಯಿ ಸಮಿತಿಗೆ ಶಾಸಕ ಮುನಿರತ್ನ ಅವರ ಬೆಂಬಲಿಗ ವೆಂಕಟೇಶ್ ಅವರನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿತ್ತಾದರೂ ಕೊನೆ ಕ್ಷಣದಲ್ಲಿ ಆದ ಬೆಳವಣಿಗೆಗಳಿಂದ ಅಪೀಲು ಸ್ಥಾಯಿ ಸಮಿತಿ ಸೀಮಾ ಅಲ್ತಾಕ್ ಅವರ ಪಾಲಾಗಿದೆ.ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಸಮಿತಿ ಯಾರು ನಾಮಪತ್ರ ಸಲ್ಲಿಸದಿರುವ ಹಿನ್ನೆಲೆಯಲ್ಲಿ ಇದರ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಲಾಯಿತು. ಈ ಸ್ಥಾಯಿ ಸಮಿತಿಗೆ ಚಂದ್ರಪ್ಪರೆಡ್ಡಿ ಮತ್ತು ಮುಜಾಹಿದ್ ಪಾಷ ನಡುವೆ ಪೈಪೋಟಿ  ನಡೆದಿದೆ.

ಜೆಡಿಎಸ್ ನಾಯಕಿ:

ಬಿಬಿಎಂಪಿಯ ಜೆಡಿಎಸ್ ಪಕ್ಷದ ನಾಯಕರಾಗಿ ರಮೀಳಾ ಉಮಾಶಂಕರ್ ಅವರನ್ನು ಆಯ್ಕೆ ಮಾಡಲಾಗಿದೆ. ಪದ್ಮನಾಭರೆಡ್ಡಿ ಮುಂದುವರಿಕೆ: ಬಿಬಿಎಂಪಿ ಪ್ರತಿಪಕ್ಷದ ನಾಯಕರಾಗಿ ಹಾಲಿ ನಾಯಕ ಪದ್ಮನಾಭರೆಡ್ಡಿ ಅವರನ್ನು ಮುಂದುವರೆಸಲು ಪಕ್ಷ ತೀರ್ಮಾನಿಸಿದೆ.

ಹಗ್ಗಾ-ಜಗ್ಗಾಟ:

ಆಡಳಿತ ಪಕ್ಷದ ನಾಯಕತ್ವಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ತೀವ್ರ  ಪೈಪೋಟಿ  ಏರ್ಪಟ್ಟಿದೆ. ಆಕಾಂಕ್ಷಿಗಳು ಹೆಚ್ಚಾಗಿರುವುದರಿಂದ ಹಗ್ಗಾಜಗ್ಗಾಟ ಮುಂದುವರೆದಿದೆ.ಸಾರಿಗೆ ಸಚಿವರು ಮತ್ತು ಕಾಂಗ್ರೆಸ್ ಮುಖಂಡರಾದ ರಾಮಲಿಂಗಾರೆಡ್ಡಿ ಅವರು ಸದ್ಯ ಬೆಂಗಳೂರಿನಲ್ಲಿ ಇಲ್ಲದ ಕಾರಣ ಯಾರನ್ನು ಆಯ್ಕೆ ಮಾಡಬೇಕೆಂಬ ಬಗ್ಗೆ ಇನ್ನೂ ಇತ್ಯರ್ಥವಾಗಿಲ್ಲ.

► Follow us on –  Facebook / Twitter  / Google+

Facebook Comments

Sri Raghav

Admin