ಬಿಎಸ್ವೈ-ಅನಂತ್ ಕಪ್ಪ ಸಂಭಾಷಣೆ : ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ನಿರ್ಧಾರ

ಈ ಸುದ್ದಿಯನ್ನು ಶೇರ್ ಮಾಡಿ

Suneel-Kumar

ಬೆಂಗಳೂರು, ಅ.10- ಹೈಕಮಾಂಡ್‍ಗೆ ಕಪ್ಪ ನೀಡಿರುವ ಬಿಜೆಪಿ ನಾಯಕರ ಸಂಭಾಷಣೆಯ ಕುರಿತ ಸಿಡಿಯ ಎಫ್‍ಎಸ್‍ಎಲ್ ವರದಿ ಬಂದಿದ್ದು, ಕಾನೂನು ತಜ್ಞರ ಅಭಿಪ್ರಾಯಪಡೆದು ಮುಂದಿನ ಕ್ರಮಕೈಗೊಳ್ಳುವುದಾಗಿ ನಗರ ಪೊಲೀಸ್ ಆಯುಕ್ತ ಪಿ.ಸುನೀಲ್‍ಕುಮಾರ್ ಹೇಳಿದರು. ಈ ಸಂಜೆಯೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಹಿರಿಯ ನಾಯಕರ ವಿರುದ್ಧ ಕೇಳಿ ಬಂದಿದ್ದ ಹೈಕಮಾಂಡ್‍ಗೆ ಕಪ್ಪ ಸಲ್ಲಿಕೆ ವಿವಾದ ಸೈಬರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ದೂರು ದಾರರು ಸಿಡಿ ಸಲ್ಲಿಸಿದ್ದರು. ಈ ಸಿಡಿಯನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿದ್ದು, ಪ್ರಯೋಗಾಲಯದಿಂದ ವರದಿ ಬಂದಿದೆ.

ಕಾನೂನು ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹಾಗೂ ಕೇಂದ್ರ ಸಚಿವ ಅನಂತ್‍ಕುಮಾರ್ ನಡುವೆ ಹೈಕಮಾಂಡ್‍ಗೆ ಕಪ್ಪ ಸಲ್ಲಿಕೆಗೆ ಸಂಬಂಧಪಟ್ಟ ಸಂಭಾಷಣೆಯ ವಿಡಿಯೋ ಕ್ಲಿಪ್ ಈ ಹಿಂದೆ ಬಿಡುಗಡೆಯಾಗಿ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಅದು ಅಸಲಿ, ನಕಲಿ ಎಂಬ ಆರೋಪ-ಪ್ರತ್ಯಾರೋಪಗಳು ಕೇಳಿ ಬಂದಿದ್ದವು.

ಈಗ ಎಫ್‍ಎಸ್‍ಎಲ್ ಸಿಡಿಯಲ್ಲಿರುವ ಧ್ವನಿ ಯಡಿಯೂರಪ್ಪ ಮತ್ತು ಅನಂತ್‍ಕುಮಾರ್ ಅವರದ್ದೇ ಎಂದು ವರದಿ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಪೊಲೀಸ್ ಆಯುಕ್ತರಾದ ಟಿ.ಸುನೀಲ್‍ಕುಮಾರ್ ಅವರನ್ನು ತಮ್ಮ ನಿವಾಸಕ್ಕ ಕರೆಸಿಕೊಂಡು ಮುಂದಿನ ಕ್ರಮದ ಬಗ್ಗೆ ನಿನ್ನೆ ಚರ್ಚೆ ನಡೆಸಿದ್ದರು. ಈ ಪ್ರಕರಣದ ಕುರಿತು ಯಾರು ತನಿಖೆ ನಡೆಸಬೇಕು, ಯಾರಿಗೆ ತನಿಖೆ ವಹಿಸಬೇಕು ಎಂಬ ಬಗ್ಗೆ ನಿನ್ನೆ ಚರ್ಚೆ ನಡೆದಿತ್ತು.

ಈ ಪ್ರಕರಣ ಸಂಬಂಧ ನಿನ್ನೆ ಯಡಿಯೂರಪ್ಪ ಮತ್ತು ಅನಂತ್‍ಕುಮಾರ್ ಅವರು ಪ್ರತಿಕ್ರಿಯೆ ನೀಡಿ ರಾಜ್ಯಸರ್ಕಾರದ ವಿರುದ್ಧ ಹರಿಹಾಯ್ದು, ಇಂತಹ ಬೆದರಿಕೆಗಳಿಗೆ ನಾವು ಜಗ್ಗುವುದಿಲ್ಲ. ಸಿಡಿಯಲ್ಲಿ ಕೆಲವೇ ಅಂಶಗಳನ್ನು ಮಾತ್ರ ಬಹಿರಂಗಪಡಿಸಲಾಗಿದೆ. ಸರ್ಕಾರ ಪೂರ್ತಿ ಸಿಡಿಯನ್ನು ಬಿಡುಗಡೆ ಮಾಡಲಿ ಎಂದು ಆಗ್ರಹಿಸಿದ್ದರು. ಅಲ್ಲದೆ ರಾಜ್ಯಸರ್ಕಾರ ದಮನಕಾರಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದ್ದರು.

Facebook Comments

Sri Raghav

Admin