ಬಿಎಸ್ವೈ ಆತುರಪಟ್ಟು ಬಿಜೆಪಿಗೆ ಹೋಗಿದ್ದು ಸರಿಯಲ್ಲ : ಬಿ.ಆರ್. ಪಾಟೀಲ್

ಈ ಸುದ್ದಿಯನ್ನು ಶೇರ್ ಮಾಡಿ

Patil

ಕಲಬುರಗಿ, ಆ.23-ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಸಂಯಮದಿಂದ ಪ್ರಾದೇಶಿಕ ಪಕ್ಷ ಕಟ್ಟಬೇಕಿತ್ತು. ಆದರೆ ಅವರು ಬಿಜೆಪಿ ಸೇರಿದ್ದು ಸೂಕ್ತವಲ್ಲ ಎಂದು ಆಳಂದ ಕೆಜೆಪಿ ಶಾಸಕ ಬಿ.ಆರ್. ಪಾಟೀಲ್ ಹೇಳಿದರು.  ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಎಸ್.ಯಡಿ ಯೂರಪ್ಪ ಬಿಜೆಪಿಯಿಂದ ಬೇಸರಪಟ್ಟುಕೊಂಡು ಆ ಪಕ್ಷ ತೊರೆದು ಕೆಜೆಪಿ ಕಟ್ಟಿದರು. ಇದೀಗ ಇದನ್ನು ಬಿಟ್ಟು ಮತ್ತೆ ಬಿಜೆಪಿಗೆ ಹೋಗಿದ್ದಾರೆ. ಇದು ನಿಜಕ್ಕೂ ಸರಿಹೋಗಲಿಲ್ಲ ಎಂದು ಹೇಳಿದರು.  ಒಂದು ವೇಳೆ ಯಡಿಯೂರಪ್ಪ ಪ್ರಾದೇಶಿಕ ಪಕ್ಷ ಕಟ್ಟಿದ್ದರೆ ಇಡೀ ರಾಜ್ಯದ ರಾಜಕೀಯವೇ ಅವರ ಸುತ್ತ ಗಿರಕಿ ಹೊಡೆಯುತ್ತಿತ್ತು. ಬಿಜೆಪಿಯಿಂದಲೂ ಸಾಕಷ್ಟು ಮಂದಿ ಕೆಜೆಪಿಗೆ ಬರುತ್ತಿದ್ದರು. ಆದರೆ ಇದನ್ನೆಲ್ಲ ಬಿಟ್ಟು ಯಡಿಯೂರಪ್ಪ ಮತ್ತೆ ಬಿಜೆಪಿ ಎಂಬ ಜೇಡರಬಲೆಯಲ್ಲಿ ಬಿದ್ದಿದ್ದಾರೆ ಎಂದು ಹೇಳಿದರು.

ಸ್ವತಃ ಯಡಿಯೂರಪ್ಪ ಅವರೇ ತಾವು ಜೈಲಿಗೆ ಹೋಗಲು ಅನೇಕ ಬಿಜೆಪಿ ನಾಯಕರ ಷಡ್ಯಂತ್ರವೇ ಕಾರಣ ಎಂದು ಹೇಳಿಕೊಂಡಿದ್ದಾರೆ. ಆದರೆ ಅವರೇ ಈಗ ಕೆಜೆಪಿ ಬಿಟ್ಟು ಬಿಜೆಪಿ ಸೇರಿಬಿಟ್ಟರು ಎಂದು ಬಿ.ಆರ್. ಪಾಟೀಲ್ ವಿಷಾದಿಸಿದರು.  ಇದೀಗ ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವೆ ಮುಸುಕಿನ ಜಗಳ ನಡೆಯುತ್ತಿದೆ. ಇವರಿಬ್ಬರ ಜಗಳದಲ್ಲಿ ಮೂರನೆಯವರು ಲಾಭ ಮಾಡಿಕೊಳ್ಳಲು ಮುಂದಾಗಿದ್ದಾರೆ. ಇದೆಲ್ಲ ಆ ಪಕ್ಷದ ಹೈಕಮಾಂಡ್ಗೆ ಗೊತ್ತಿದ್ದರೂ ಸುಮ್ಮನಿದ್ದಾರೆ. ಈ ಮೂಲಕ ಮತ್ತೆ ಯಡಿಯೂರಪ್ಪ ಅವರನ್ನು ಹತ್ತಿಕ್ಕುವ ಕೆಲಸವಾಗುತ್ತಿದೆ. ಇದೆಲ್ಲ ಏಕೆ ಯಡಿಯೂರಪ್ಪ ಅವರಿಗೆ ತಿಳಿಯುತ್ತಿಲ್ಲ ಎಂದು ಪ್ರಶ್ನಿಸಿದರು.

► Follow us on –  Facebook / Twitter  / Google+

 

Facebook Comments

Sri Raghav

Admin