ಬಿಎಸ್‍ಎಫ್ ಯೋಧರ ಗುಂಡಿಗೆ ಒಳನುಸುಳುಕೋರರು ಬಲಿ, 2 ಪಾಕ್ ನೆಲೆಗಳು ಧ್ವಂಸ

ಈ ಸುದ್ದಿಯನ್ನು ಶೇರ್ ಮಾಡಿ

Firing--01

ಜಮ್ಮು, ಜ.4-ಜಮ್ಮು ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಮೂಲಕ ಒಳ ನುಸುಳುತ್ತಿದ್ದ ಅತಿಕ್ರಮಣಕೋರನನ್ನು ಗಡಿ ಭದ್ರತಾ ಪಡೆ(ಬಿಎಸ್‍ಎಫ್) ಯೋಧರು ಗುಂಡಿಟ್ಟು ಕೊಂದಿದ್ದಾರೆ. ಈ ಕಾರ್ಯಾಚರಣೆ ಮೂಲಕ ಒಳನುಸುಳುವಿಕೆ ಮತ್ತು ವಿಧ್ವಂಸಕ ಕೃತ್ಯ ಯತ್ನವನ್ನು ಭಾರತೀಯ ಸೇನೆ ವಿಫಲಗೊಳಿಸಿದೆ.
ಇದೇ ವೇಳೆ, ಬಿಎಸ್‍ಎಫ್ ಯೋಧ ಜೆ.ಪಿ ಹಜ್ರಾ ಹತ್ಯೆಗೆ ಪ್ರತೀಕಾರ ತೆಗೆದುಕೊಂಡಿರುವ ಭಾರತೀಯ ಸೈನಿಕರು ಪಾಕಿಸ್ತಾನದ ಎರಡು ಸೇನಾ ನೆಲೆಗಳನ್ನು ಧ್ವಂಸಗೊಳಿಸಿವೆ.

ಜ ಮ್ಮುವಿನ ಅರ್ನಿಯಾ ಸೆಕ್ಟರ್‍ನಲ್ಲಿ ಇಂದು ಮುಂಜಾನೆ 5.45ರಲ್ಲಿ ನಿಕೊವಲ್ ಬಾರ್ಡರ್ ಔಟ್ ಪೋಸ್ಟ್(ಬಿಒಪಿ) ಬಳಿ ಅಂತಾರಾಷ್ಟ್ರೀಯ ಗಡಿಯಲ್ಲಿ ಮೂವರು ವ್ಯಕ್ತಿಗಳ ಶಂಕಾಸ್ಪದ ಚಲನೆಯನ್ನು ಯೋಧರು ಗಮನಿಸಿದರು. ಇದೇ ಸಂದರ್ಭದಲ್ಲಿ ನುಸುಳುಕೋರರು ಗುಂಡು ಹಾರಿಸಿದಾಗ ಬಿಎಸ್‍ಎಫ್ ಪಡೆ ದಿಟ್ಟ ಪ್ರತ್ಯುತ್ತರ ನೀಡಿತು. ಗುಂಡಿನ ಚಕಮಕಿ ವೇಳೆ ಒಬ್ಬ ಹತನಾಗಿ, ಇನ್ನಿಬ್ಬರು ಪರಾರಿಯಾದರು. ಮೃತ ನುಸುಳುಕೋರನು 30 ವರ್ಷ ಯುವಕನಾಗಿದ್ದು, ಪಾಕಿಸ್ತಾನದ ಮೂಲದವನೆಂದು ಬಿಎಸ್‍ಎಫ್‍ನ ಜಮ್ಮು ಗಡಿ ಪ್ರದೇಶದ ಮಹಾ ನಿರೀಕ್ಷಕ ರಾಮ್ ಅವತಾರ್ ತಿಳಿಸಿದ್ದಾರೆ.

ಇದೇ ವೇಳೆ, ಪಾಕಿಸ್ತಾನದ ಅಪ್ರಚೋದಿತ ಗುಂಡಿನ ದಾಳಿಗೆ ದಿಟ್ಟ ಉತ್ತರ ನೀಡಿರುವ ಬಿಎಸ್‍ಎಫ್ ಯೋಧರು ವೈರಿ ಪಡೆಯ ಎರಡು ಸೇನಾ ನೆಲೆಗಳನ್ನು ಧ್ವಂಸಗೊಳಿಸಿವೆ. ಈ ಮೂಲಕ ನಿನ್ನೆ ಬಿಎಸ್‍ಎಫ್ ಮುಖ್ಯ ಪೇದೆ ಹಜ್ರಾ ಹತ್ಯೆಗೆ ಯೋಧರು ಸೇಡು ತೀರಿಸಿಕೊಂಡಿದ್ಧಾರೆ. ಬಿಎಸ್‍ಎಫ್ ಪಡೆಗಳು ನಿನ್ನೆ ರಾತ್ರಿ ಪಾಕಿಸ್ತಾನದ ಎರಡು ಮಾರ್ಟರ್ ಪೊಸಿಷನ್(ಗನ್ ಪಾಯಿಂಟ್) ಮೇಲೆ ಗುರಿಯಾಗಿಟ್ಟುಕೊಂಡು ನಿಖರ ದಾಲಿ ನಡೆಸಿದ್ದವು. ಆ ನೆಲೆಗಳು ಸಂಪೂರ್ಣ ಧ್ವಂಸವಾಗಿದ್ದು, ಈ ದಾಳಿ ನಂತರ ಪಾಕ್ ಯೋಧರ ಗುಂಡಿನ ಮೊರೆತ ಸ್ತಬ್ಧಗೊಂಡಿತು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Facebook Comments

Sri Raghav

Admin