ಬಿಎಸ್‍ಎಫ್ ಯೋಧರ ಗುಂಡಿಗೆ ಪಾಕ್ ಉಗ್ರ ಬಲಿ

ಈ ಸುದ್ದಿಯನ್ನು ಶೇರ್ ಮಾಡಿ

Border--01

ನವದೆಹಲಿ, ಮೇ 15- ಪಂಜಾಬ್‍ನ ಗುರುದಾಸ್‍ಪುರ್ ಸೆಕ್ಟರ್‍ನ ಬರಿಯಾಲಾದಲ್ಲಿ ಇಂದು ಮುಂಜಾನೆ ಗಡಿ ಭದ್ರತಾ ಪಡೆ(ಬಿಎಸ್‍ಎಫ್)ಯೋಧರು ಪಾಕಿಸ್ತಾನದ ನುಸುಳುಕೋರನೊಬ್ಬನನ್ನು ಗುಂಡಿಟ್ಟು ಕೊಂದಿದ್ದಾರೆ. ಮೂರು ಕಡೆಗಳಿಂದ ಸುತ್ತುವರಿದ ರವಿ ನದಿ ಪಾತ್ರದ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಭಾರತ-ಪಾಕಿಸ್ತಾನದ ಗಡಿ ಭಾಗದ ಬೇಲಿಯಲ್ಲಿ ಶಂಕಾಸ್ಪದ ಚಲನವಲನ ಕಂಡುಬಂದಿತು. ಪುನರಾವರ್ತಿತ ಎಚ್ಚರಿಕೆ ನಡುವೆಯೂ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಈ ಉಗ್ರನನ್ನು ಗುಂಡಿಟ್ಟು ಕೊಲ್ಲಲಾಗಿದೆ ಎಂದು ಬಿಎಸ್‍ಎಫ್ ಉನ್ನತಾಧಿಕಾರಿಗಳು ತಿಳಿಸಿದ್ದಾರೆ.ಗಡಿ ಭಾಗದಲ್ಲಿ ಈ ವರ್ಷದಲ್ಲಿ ಪಾಕಿಸ್ತಾನದಿಂದ 50ಕ್ಕೂ ಹೆಚ್ಚು ನುಸುಳುವಿಕೆ ಪ್ರಕರಣಗಳು ವರದಿಯಾಗಿವೆ. 35 ಯತ್ನಗಳನ್ನು ಯೋಧರು ವಿಫಲಗೊಳಿಸಿದ್ದರೆ, 15 ಪ್ರಕರಣಗಳಲ್ಲಿ ಉಗ್ರರು ಗಡಿಯೊಳಗೆ ನುಸುಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS

Facebook Comments

Sri Raghav

Admin