ಬಿಜೆಪಿಗರನ್ನು ಬಿಡದ ಐಟಿ, ಶ್ರೀರಾಮುಲು ತಂಗಿದ್ದ ಹೊಟೇಲ್ ಮೇಲೆ ದಾಳಿ

ಈ ಸುದ್ದಿಯನ್ನು ಶೇರ್ ಮಾಡಿ

Ramulu--01

ಬಾದಾಮಿ, ಮೇ 9- ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಶ್ರೀರಾಮುಲು ಅವರು ತಂಗಿದ್ದ ಇಲ್ಲಿನ ಬಾದಾಮಿ ಕೋರ್ಟ್ ಹೊಟೇಲ್ ಮೇಲೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ರಾಮುಲು ಕೋಣೆಗಳು ಹಾಗೂ ಹಾಜರಾತಿ ಪುಸ್ತಕದಲ್ಲಿನ ಮಾಹಿತಿ ಸೇರಿದಂತೆ ಹಲವು ದಾಖಲೆಗಳನ್ನು ಪರಿಶೀಲಿಸಲಾಗಿದೆ. ಐಟಿ ಅಧಿಕಾರಿ ಪಿ.ರಮೇಶ್‍ಕುಮಾರ್ ಅವರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದೆ. ಹೊಟೇಲ್‍ನ ಮಾಲೀಕರಿಗೆ ನೋಟೀಸ್ ಕೂಡ ನೀಡಲಾಗುತ್ತಿದೆ. ಮೊಣಕಾಲ್ಮೂರಿನಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ರೇವಣ್ಣ ಅವರ ನಿವಾಸ ಹಾಗೂ ಕೋಳಿ ಫಾರಂ ಸೇರಿದಂತೆ ಇತರೆಡೆಯೂ ಕೂಡ ಐಟಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇವರು ಶ್ರೀರಾಮುಲು ಅವರ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ.  ಸುಮಾರು ಎರಡು ತಾಸುಗಳಿಗೂ ಹೆಚ್ಚು ಕಾಲ ತಪಾಸಣೆ ನಡೆಸಿ ಕೆಲ ಪ್ರಶ್ನೆಗಳ ಪಟ್ಟಿಗಳನ್ನು ನೀಡಿ ಅಲ್ಲಿಂದ ಅಧಿಕಾರಿಗಳು ತೆರಳಿದ್ದಾರೆ.

Facebook Comments

Sri Raghav

Admin