ಬಿಜೆಪಿಗೆ ಟಾಂಗ್ ಕೊಟ್ಟ ಸಚಿವ ಪ್ರಿಯಾಂಕ್ ಖರ್ಗೆ

ಈ ಸುದ್ದಿಯನ್ನು ಶೇರ್ ಮಾಡಿ

Priyank-Kharghe

ಬೆಂಗಳೂರು, ಜ.1-ಕರ್ನಾಟಕ ಸರ್ಕಾರ ಏರೋಸ್ಪೇಸ್, ಐಟಿ-ಬಿಟಿ, ಕೃಷಿ ಸೇರಿದಂತೆ ಹಲವಾರು ಕ್ಷೇತ್ರಗಳಲ್ಲಿ ನವ ಆವಿಷ್ಕಾರಗಳನ್ನು ಸ್ಥಾಪಿಸುವಲ್ಲಿ ಮೊದಲನೆಯದಾಗಿದೆ. ಬಿಜೆಪಿಯವರು ಸುಳ್ಳು ಪ್ರಚಾರವನ್ನು ಬಿಟ್ಟು ನವ ಆವಿಷ್ಕಾರ ಕೇಂದ್ರಗಳಿಗೆ ಭೇಟಿ ನೀಡಿ ಸತ್ಯ ತಿಳಿದುಕೊಳ್ಳಲಿ ಎಂದು ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್ ನೀಡಿದ್ದಾರೆ. ಬಿಜೆಪಿ ತನ್ನ ಟ್ವೀಟರ್ ಖಾತೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಿಪ್ಪು ಜಯಂತಿ ವೇಳೆ, ಟಿಪ್ಪು ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸುತ್ತಿರುವ ಫೋಟೋ ಹಾಕಿ ಕಾಂಗ್ರೆಸ್ ನಾಯಕರು ಟಿಪ್ಪು ಜಯಂತಿ ಆಚರಿಸುತ್ತಿದ್ದಾರೆ ಎಂದು ಹೇಳಿದ್ದು, ಅದರ ಪಕ್ಕದಲ್ಲಿ ನಿರ್ಮಲಾ ಸೀತಾರಾಮ್ ಅವರು ಸಿಇಒಎಲ್ ಕೇಂದ್ರ ಉದ್ಘಾಟಿಸುತ್ತಿರುವ ಫೋಟೋ ಹಾಕಿ ಬಿಜೆಪಿ ನಾಯಕರು ನವೋದ್ಯಮಗಳಿಗಾಗಿ ನವ ಆವಿಷ್ಕಾರ ಕೇಂದ್ರಗಳನ್ನು ಆರಂಭಿಸುತ್ತಿದ್ದಾರೆ ಎಂದು ಹಾಕಲಾಗಿತ್ತು.

ಇದಕ್ಕೆ ಅಷ್ಟೇ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಚಿವ ಪ್ರಿಯಾಂಕ್‍ಖರ್ಗೆ, ನಾವು ಸಂಶೋಧಕ ಟಿಪ್ಪು ಜಯಂತಿಯನ್ನೂ ಆಚರಿಸುತ್ತೇವೆ, ಅದರ ಜೊತೆಗೆ ಕರ್ನಾಟಕದಲ್ಲಿ ಈಗಾಗಲೇ ಏರೋಸ್ಪೇಸ್ ಕ್ಷೇತ್ರ, ಅಂತರ್ಜಾಲಕ್ಕೆ ಸಂಬಂಧಪಟ್ಟಂತೆ ಎಐ, ಬಿಗ್ ಡಾಟಾ, ಮಿಷನ್ ಲರ್ನಿಂಗ್, ಬಿ.ಸಿ, ಸೈಬರ್ ಸೆಕ್ಯೂರಿಟಿ, ಕೃಷಿ ತಂತ್ರಜ್ಞಾನ, ಆನಿಮೇಷನ್, ಗೇಮಿಂಗ್ ಸೇರಿದಂತೆ ಹಲವಾರು ಪ್ರಮುಖ ಕ್ಷೇತ್ರಗಳಲ್ಲಿ ನವ ಆವಿಷ್ಕಾರ ಕೇಂದ್ರಗಳನ್ನು ಆರಂಭಿಸಿದ್ದೇವೆ. ಹೊಸದಾಗಿ ಆರಂಭಿಸುವುದು ಇನ್ನೇನಾದರೂ ಉಳಿದಿದ್ದರೆ ಸಲಹೆ ನೀಡಿ ಎಂದು ತಿರುಗೇಟು ನೀಡಿದ್ದಾರೆ.

ಒಮ್ಮೆ ಬಿಜೆಪಿ ನಾಯಕರು ನಮ್ಮ ಕೇಂದ್ರಗಳಿಗೆ ಭೇಟಿ ನೀಡಲಿ. ನಿಮಗೆ ರಾಜ್ಯಸರ್ಕಾರದ ಸಾಧನೆಗಳನ್ನು ನೋಡಿ ಆಶ್ಚರ್ಯವಾಗುವುದು ನಿಶ್ಚಿತ. ಬಹುಶಃ ನೀವು ಕೇಂದ್ರಗಳಿಗೆ ಭೇಟಿ ನೀಡಿದ ನಂತರ ಸುಳ್ಳು ಪ್ರಚಾರ ಮಾಡದೆ ಇರಲು ಸಹಾಯವಾಗಬಹುದು ಎಂದು ನೇರವಾಗಿ ಟ್ವೀಟರ್ ಖಾತೆಯಲ್ಲಿ ಸಲಹೆ ನೀಡಿದ್ದಾರೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin