ಬಿಜೆಪಿಗೆ ರಾಷ್ಟ್ರಪತಿ ಆಯ್ಕೆ ಹಾದಿ ಸುಗಮ

ಈ ಸುದ್ದಿಯನ್ನು ಶೇರ್ ಮಾಡಿ

bjp

ನವದೆಹಲಿ, ಮಾ.12- ಉತ್ತರ ಪ್ರದೇಶ ಮತ್ತು ಉತ್ತರಾಖಂಡ್‍ನಲ್ಲಿ ಬಿಜೆಪಿ ಭರ್ಜರಿ ಜಯ ದಾಖಲಿಸಿರುವ ಹಿನ್ನೆಲೆಯಲ್ಲಿ ತನ್ನಿಚ್ಚೆಯಂತೆ ಹೊಸ ರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಬಿಜೆಪಿಗೆ ಹಾದಿ ಸುಗಮವಾಗಿದೆ.  ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರ ಅಧಿಕಾರಾವಧಿ ಜುಲೈಗೆ ಪೂರ್ಣಗೊಳ್ಳಲಿದೆ. ಸಂಸತ್ತಿನ ಉಭಯ ಸದನಗಳ ಚುನಾಯಿತ ಸದಸ್ಯರುಗಳಿಂದ ರಾಜ್ಯಗಳು ಹಾಗೂ ದೆಹಲಿ ಮತ್ತು ಪುದುಚೇರಿ ಕೇಂದ್ರಾಡಳಿತ ಪ್ರದೇಶಗಳ ಚುನಾಯಿತ ಶಾಸಕರುಗಳಿಂದ ರಾಷ್ಟ್ರಪತಿಯನ್ನು ಚುನಾಯಿಸಲಾಗುತ್ತದೆ. ರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಕೇಂದ್ರದ ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‍ಡಿಎ)  ಮತಗಳ ಪಾಲಿನಲ್ಲಿ ಬಹುಮತಕ್ಕೆ ಅಲ್ಪ ಕೊರತೆ ಇದೆ. ಆದಾಗ್ಯೂ ಈ ಅಂತರವನ್ನು ಬಿಜು ಜನತಾದಳ (ಬಿಜೆಡಿ) ಮತ್ತು ಎಐಎಡಿಎಂಕೆಯಂತ ಒಂದು ಅಥವಾ ಎರಡು ಯುಪಿಎಯೇತರ ಸದಸ್ಯರ ಬೆಂಬಲದೊಂದಿಗೆ ಸರಿದೂಗಿಸಬಹುದಾಗಿದೆ.

ಉತ್ತರ ಪ್ರದೇಶ, ಉತ್ತರಾಖಂಡ್, ಪಂಜಾಬ್, ಮಣಿಪುರ ಮತ್ತು ಗೋವಾ ಈ ಐದು ರಾಜ್ಯಗಳ ವಿಧಾನಸಭೆ ಚುನಾವಣಾ ಫಲಿತಾಂಶ ಘೋಷಣೆಗೆ ಮುನ್ನ ಎಲೆಕ್ಟ್ರೋಲ್ ಕಾಲೇಜು (ಚುನಾಯಿತ ಪ್ರತಿನಿಧಿಗಳ ಮೌಲ್ಯವಾರು ಮತ) ಬಹುಮತದಿಂದ ಎನ್‍ಡಿಎ 75,076ರಷ್ಟು (ಮತಗಳ ಮೌಲ್ಯಗಳು) ಕೊರತೆ ಹೊಂದಿತು. ಎಲೆಕ್ಟ್ರೋಲ್ ಕಾಲೇಜು- 10,98,882 ಮತಗಳ ಒಟ್ಟು ಮೌಲ್ಯ ಹೊಂದಿದೆ). ಉತ್ತರ ಪ್ರದೇಶ ಮತ್ತು ಉತ್ತರಾಖಂಡ್‍ನಲ್ಲಿ ಬಿಜೆಪಿ ಭಾರೀ ಬಹುಮತದೊಂದಿಗೆ ಜಯ ಸಾಧಿಸಿರುವುದರಿಂದ 20,000 ಮತಗಳ ಮೌಲ್ಯದ ಕೊರತೆ ಕಡಿಮೆಯಾಗಿದೆ.  ಅಧ್ಯಕ್ಷೀಯ ಚುನಾವಣೆಗಾಗಿ ಬಿಜೆಪಿ ಮತ್ತು ಎಐಎಡಿಎಂಕೆ ಹಾಗೂ ಸ್ವತಂತ್ರ ಸಂಸದರು ಮತ್ತು ಶಾಸಕರಿಗೆ ಗಾಳ ಹಾಕಿ ಎನ್‍ಡಿಎ ಈ ಅಂತರವನ್ನೂ ಇನ್ನಷ್ಟು ಕಡಿಮೆ ಮಾಡಬಹುದಾಗಿದೆ.

ಎನ್‍ಡಿಎಗೆ ಬಿಜೆಪಿ ಅಭ್ಯರ್ಥಿ ಬೆಂಬಲ ನೀಡಿದರೆ ಒಡಿಶಾ ವಿಧಾನಸಭೆಯ 117 ಶಾಸಕರಿಂದ 17,433 ಮತಗಳ ಮೌಲ್ಯ ಲಭಿಸುತ್ತವೆ. ಅದೇ ರೀತಿ 17,433 ಮತಗಳ ಮೌಲ್ಯ ಲಭಿಸುತ್ತದೆ. ಅದೇ ರೀತಿ ಎಐಎಡಿಎಂಕೆಯಿಂದ 23,584 ಮತಗಳು (134 ಶಾಸಕರು) ದೊರೆಯುತ್ತವೆ. ಹೀಗಾಗಿ ತನಗೆ ಬೇಕಾದ ನೂತನ ರಾಷ್ಟ್ರಪತಿಯನ್ನು ಆಯ್ಕೆ ಮಾಡಲು ಎನ್‍ಡಿಎಗೆ ಹಾದಿ ಸುಗಮವಾಗಿದೆ.

< Eesanje News 24/7 ನ್ಯೂಸ್ ಆ್ಯಪ್  >

 Click Here to Download  :  Android / iOS  

Facebook Comments

Sri Raghav

Admin